ಮುಂಬಯಿ: ನಾಯಕ ಫಾಫ್ ಡುಪ್ಲೆಸಿಸ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಾಟಾ ಐಪಿಎಲ್‌ನ 31ನೇ ಪಂದ್ಯದಲ್ಲಿ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 18 ರನ್‌ಗಳಿಂದ ಪರಾಭವಗೊಳಿಸಿ ಅಂಕಪಟ್ಟಿಯಲ್ಲಿ ಗುಜರಾತ್ ಜತೆಗೆ ಜಂಟಿಯಾಗಿ ಅಗ್ರಸ್ಥಾನಕ್ಕೇರಿದೆ.
ಲಕ್ನೋ ತಂಡ ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್‌ಗೆ ಬ್ಯಾಟಿಂಗ್ ಅವಕಾಶ ನೀಡಿತು. ಶತಕ ವಂಚಿತ ಡುಪ್ಲೆಸಿಸ್ 96 ರನ್ (62 ಎಸೆತ, 11 ಬೌಂಡರಿ, 2 ಸಿಕ್ಸರ್) ಬಹುತೇಕ ಏಕಾಂಗಿಯಾಗಿ ಹೋರಾಡಿ ತಂಡವು ಸವಾಲಿನ ಮೊತ್ತ 6 ವಿಕೆಟ್‌ಗೆ 181 ರನ್ ಕಲೆ ಹಾಕುವಂತೆ ಮಾಡಿದರು. ಕೊಹ್ಲಿ ಸೊನ್ನೆ ಸುತ್ತಿದರೆ, ಮ್ಯಾಕ್ಸ್ ವೆಲ್ (23), ಶಾಬಾಜ್ ಅಹ್ಮದ್ (26) ನಾಯಕನಿಗೆ ಸಾಥ್ ನೀಡಿದರು. ಚಮೀರ, ಹೋಲ್ಡರ್ ತಲಾ ಎರಡು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಮುಗ್ಗರಿಸಿತು. ಡಿಕಾಕ್. ಮನೀಷ್ ಪಾಂಡೆ ವಿಫಲರಾದರು. ನಾಯಕ ರಾಹುಲ್ (30), ಕೃನಾಲ್ ಪಾಂಡ್ಯಾ (46) ಹಾಗೂ ಸ್ಟೊಯಿನಿಸ್ (26) ಪ್ರತಿರೋಧ ತಂಡದ ಗೆಲುವಿಗೆ ಪರ್ಯಾಪ್ತವಾಗಲಿಲ್ಲ. ತಂಡವು 163 ರನ್ ಗಳಿಸಲಷ್ಟೇ ಶಕ್ತವಾಗಿ, ಸೋಲೊಪ್ಪಿಕೊಂಡಿತು. ಜೋಶ್ ಹಾಝೆಲ್‌ವುಡ್ 25 ರನ್ ನೀಡಿ 4 ವಿಕೆಟ್ ಪಡೆದರೆ, ಹೋಲ್ಡರ್ 2 ವಿಕೆಟ್ ಸಂಪಾದಿಸಿದರು. ಡುಪ್ಲೆಸಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮಹತ್ವದ ಪಂದ್ಯದಲ್ಲಿ ಬುಧವಾರ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.
Previous Articleಪುನೀತ್ ಗಾಗಿ ‘ಆಹ್ವಾನ’ ಸಿನಿಮಾ ತಯಾರಿಸಲಿದ್ದ ಪ್ರಶಾಂತ್ ನೀಲ್
Next Article ದಾಖಲೆ ಬೇಕಾ…? ದಾಖಲೆ…