ಬೆಂಗಳೂರು.
ಕಲಿಯುಗದ ಪ್ರತ್ಯಕ್ಷ ದೈವ ಎಂದೆ ತಿರುಪತಿಯ ವೆಂಕಟೇಶ್ವರನನ್ನು ಆರಾಧಿಸಿ ಪೂಜಿಸುತ್ತಾರೆ. ಏಳು ಬೆಟ್ಟದ ಒಡೆಯನ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ತಿರುಪತಿಗೆ ಭೇಟಿ ನೀಡುತ್ತಾರೆ.
ಸರತಿ ಸಾಲಿನಲ್ಲಿ ದಿನ ಗಟ್ಟಲೆ ಕಾದು ನಿಂತು ಕೇವಲ ಒಂದೆರಡು ನಿಮಿಷ ಮಾತ್ರ ವೆಂಕಟೇಶ್ವರನ ದರ್ಶನ ಸಿಗುತ್ತದೆ. ಹೆಚ್ಚಿನ ಅವಧಿ ಹಾಗೂ ಶೀಘ್ರ ದರ್ಶನಕ್ಕಾಗಿ ಭಕ್ತರು ಲಕ್ವಾಂತರ ರೂಪಾಯಿ ವಿನಿಯೋಗಿಸಲು ಸಿದ್ಧರಿರುತ್ತಾರೆ.
ಭಕ್ತರ ಇಂತಹ ಮನೋಭಿಲಾಷ ಅರಿತ ಕೆಲವು ವಂಚಕರು ವೆಂಕಟೇಶ್ವರನ ದರ್ಶನ ಮಾಡಿಸುವ ಇಲ್ಲವೇ ವಿಶೇಷ ಪೂಜೆ ಅಥವಾ ಆರಾಧನೆಗೆ ವ್ಯವಸ್ಥೆ ಮಾಡಿಕೊಡುವ ಹೆಸರಿನಲ್ಲಿ ವಂಚನೆ ಮಾಡುವ ಪ್ರಕರಣಗಳು ನಡೆಯುತ್ತಲೇ ಇರುತ್ತದೆ.
ಮೊನ್ನೆ ಮೊನ್ನೆಯಷ್ಟೇ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮ್ಯಾನೇಜರ್ ಗೆ ಶೀಘ್ರವಾಗಿ ವಿಐಪಿ ದರ್ಶನ ಮಾಡಿಸುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಪ್ರಕರಣ ನಡೆದಿತ್ತು ಇದು ಇನ್ನೂ ಹಸಿರಾಗಿರುವಾಗಲೇ ನೆಲಮಂಗಲ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರಿಗೆ ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಬಿಜೆಪಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರನ್ನು ಈ ಹಿಂದಿನ ಆಂಧ್ರಪ್ರದೇಶ ಸರ್ಕಾರ ತಿರುಪತಿ ದೇವಸ್ಥಾನ ಟ್ರಸ್ಟ್ ನ ಸದಸ್ಯರಾಗಿ ನೇಮಕ ಮಾಡಿತ್ತು. ಶಾಸಕ ವಿಶ್ವನಾಥ್ ಅವರು ಕರ್ನಾಟಕದಿಂದ ತಿರುಪತಿಗೆ ಹೋಗುವವರಿಗೆ ದರ್ಶನ, ವಸತಿ ಸೌಲಭ್ಯ ಕಲ್ಪಿಸಿಕೊಡುತ್ತಿದ್ದರು ಇದಕ್ಕಾಗಿ ಮಾರುತಿ ಎಂಬ ಹೆಸರಿನ ಸಿಬ್ಬಂದಿಯನ್ನು ನೇಮಕ ಮಾಡಿದ್ದರು.
ಈ ವ್ಯಕ್ತಿ ವಿಶ್ವನಾಥ್ ಟಿಟಿಡಿ ಯ ಸದಸ್ಯರಾಗಿರುವವರೆಗೆ ತಿರುಪತಿಯಲ್ಲಿ ತಮ್ಮ ಶಾಸಕರು ಸೂಚಿಸಿದ ವ್ಯಕ್ತಿಗಳಿಗೆ ದೇವರ ದರ್ಶನ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದ್ದರು.
ವಿಶ್ವನಾಥ್ ಅವರ ಅವಧಿ ಮುಗಿಯುತ್ತಿದ್ದಂತೆ ಅವರು ಮಾರುತಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರು. ಇದಾದ ನಂತರವೂ ಮಾರುತಿ ತಿರುಪತಿಯಲ್ಲಿ ಕೆಲವರ ಸಂಪರ್ಕದೊಂದಿಗೆ ಆಸಕ್ತರಿಗೆ ದುಬಾರಿ ಬೆಲೆಗೆ ದೇವರ ದರ್ಶನ ಮತ್ತು ಇತರೆ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದರು.
ಅದೇ ರೀತಿ ಶಾಸಕ ಶ್ರೀನಿವಾಸ್ ಮತ್ತು ಅವರ ಆತನಿಗೆ ದೇವರ ದರ್ಶನ ಮತ್ತು ಅಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುವುದಾಗಿ ಹೇಳಿ ಎಂಟು ಲಕ್ಷ ರೂಪಾಯಿ ಪಡೆದುಕೊಂಡಿದ್ದ ಆದರೆ ವರ್ಷ ಕಳೆದರೂ ಶಾಸಕರು ಸೇರಿದಂತೆ ಯಾರಿಗೂ ಯಾವುದೇ ರೀತಿಯ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಿಲ್ಲ ಜೊತೆಗೆ ಹಣ ಕೂಡ ವಾಪಸ್ ಕೊಡಲಿಲ್ಲ ಇದರಿಂದ ಬೇಸರಗೊಂಡ ಶಾಸಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಇದಾದ ನಂತರ ಮಾರುತಿ ತಲೆಮರಿಸಿಕೊಂಡಿದ್ದ ಎಂದು ಹೇಳಲಾಗಿದೆ. ಇದೀಗ ಆತನನ್ನು ಪತ್ತೆ ಹಚ್ಚಿರುವ ನೆಲಮಂಗಲ ಪೊಲೀಸರು ಅವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ
Previous Articleಡಿಜಿಟಲ್ ಅರೆಸ್ಟ್ ವಂಚಕ ಅರೆಸ್ಟ್.
Next Article ಕಾಡಿನಲ್ಲಿ ನಾಡ ಬಾಂಬ್ ಇಟ್ಟ ಕೇಡಿಗಳು.