ಆಂಧ್ರಪ್ರದೇಶ : ಅಸನಿ ಚಂಡಮಾರುತದಿಂದ ತತ್ತರಿಸಿರುವ ಆಂಧ್ರಪ್ರದೇಶದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಳ್ಳಿ ಕರಾವಳಿ ತೀರದಲ್ಲಿ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದರೆ, ಅಧಿಕಾರಿಗಳು ರಥದ ಮೂಲ ಪತ್ತೆ ಹಚ್ಚಲು ತನಿಖೆ ಅರಂಭಿಸಿದ್ದಾರೆ. ಚಿನ್ನದ ಬಣ್ಣದ ಲೇಪನವುಳ್ಳ ರಥವನ್ನು ಹೋಲುವ ರಚನೆಯು ಸಮುದ್ರದಲ್ಲಿ ತೇಲಿಬಂದಿದೆ. ಭಾರಿ ಅಲೆ, ಗಾಳಿಯ ಹೊಡೆತದ ನಡುವೆಯೂ ಈ ರಥ ಬಹುತೇಕ ಗಟ್ಟಿಮುಟ್ಟಾಗಿರುವುದು ವಿಶೇಷ. ಈ ರಥವನ್ನು ಮ್ಯಾನ್ಮಾರ್, ಮಲೇಷ್ಯಾ, ಥಾಯ್ಲೆಂಡ್, ಜಪಾನ್, ಕಾಂಬೋಡಿಯಾ ಅಥವಾ ಇಂಡೋನೇಷ್ಯಾದಲ್ಲಿ ಕರಾವಳಿ ತೀರದಲ್ಲಿ ಇರಿಸಿದ್ದಿರಬಹುದು ಎಂದು ಊಹಿಸಲಾಗಿದೆ. ಅಸನಿ ಚಂಡಮಾರುತದ (Cyclone Asani) ಪ್ರಭಾವದಿಂದ ಅದು ಆಂಧ್ರದ ಕರಾವಳಿ ಕಡೆಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ಕಡಲ ತೀರದಲ್ಲಿ ರಥವನ್ನು ಕಂಡು ಅಚ್ಚರಿಗೊಳಗಾದ ಸ್ಥಳೀಯರು, ಅದರ ಬಳಿ ತೆರಳಿ ಹಗ್ಗಗಳನ್ನು ಕಟ್ಟಿ, ಅದನ್ನು ತೀರಕ್ಕೆ ಎಳೆದು ತಂದಿದ್ದಾರೆ.
ರಥದ ಮೇಲೆ 16-01-2022 ಎಂದು ದಿನಾಂಕ ಕೆತ್ತಲಾಗಿದೆ. ಇದು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇರುವ ಬೌದ್ಧ ವಿಹಾರಗಳ ಆಕಾರವನ್ನು ಹೋಲುತ್ತದೆ. ಚಂಡಮಾರುತದ ಪರಿಣಾಮ ಉಂಟಾದ ಬೃಹತ್ ಅಲೆಗಳಿಂದ ಈ ರಥ ಕರಾವಳಿಯ ಕಡೆಗೆ ತೇಲಿ ಬಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ‘ಚಿನ್ನದ ರಥ’ (Golden Chariot) ನೋಡಲು ಅಕ್ಕಪಕ್ಕದ ಊರುಗಳ ಗ್ರಾಮಸ್ಥರು ಈ ಕಡಲ ತೀರಕ್ಕೆ ಧಾವಿಸುತ್ತಿದ್ದಾರೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022
