Bengaluru
ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಕನ್ನಡ ಚಿತ್ರರಂಗದ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ.
ವಿಚಾರಣಾದೀನ ಖೈದಿಯಾಗಿರುವ ದರ್ಶನ್ ಭೋಜನ ಪ್ರಿಯ. ಅದರಲ್ಲೂ ಮಾಂಸಾಹಾರ ಅಚ್ಚುಮೆಚ್ಚು. ಆದರೆ ಜೈಲಿನ ಮ್ಯಾನುಯಲ್ ಪ್ರಕಾರ ನಿರ್ದಿಷ್ಟ ಪಡಿಸಿದ ದಿನ ಮಾತ್ರ ತಿನ್ನಲು ಇವರಿಗೆ ಮಾಂಸಾಹಾರ ನೀಡಲಾಗುತ್ತದೆ.
ಆದರೆ ದರ್ಶನ್ ಕಥೆ ಇಲ್ಲಿ ಬೇರೆಯದೇ ಆಗಿದೆ. ರೌಡಿಶೀಟರ್ ಒಬ್ಬ ತಮ್ಮ ಆಪ್ತರ ಮೂಲಕ ಬನಶಂಕರಿಯ ಪ್ರಸಿದ್ಧ ಶಿವಾಜಿ ಮಿಲಿಟರಿ ಹೋಟೆಲ್ ನಿಂದ ದರ್ಶನ್ ಗೆ ಮಾಂಸಾಹಾರ ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಬಿರಿಯಾನಿ ಜೊತೆಗೆ ಬಗೆ ಬಗೆಯ ಖಾದ್ಯಗಳನ್ನು ಸಮಯಕ್ಕೆ ಸರಿಯಾಗಿ ದರ್ಶನ್ ಗೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದರ್ಶನ್ ಜೈಲಿನ ಬ್ಯಾರಕ್ ಹೊರಗಡೆ ತನ್ನ ಆಪ್ತರೊಂದಿಗೆ ಕುರ್ಚಿ ಯ ಮೇಲೆ ಕುಳಿತು ಕಾಫಿ ಹೀರುತ್ತಾ ಸಿಗರೇಟ್ ಫೋಟೋ ಬಹಿರಂಗವಾದ ಬೆನ್ನಲ್ಲೇ ಆಂತರಿಕ ತನಿಖೆಗೆ ಆದೇಶಿಸಿದ್ದು ಈ ವೇಳೆ ಕಾಫಿ ಸಿಗರೇಟ್ ಮಾತ್ರವಲ್ಲ ಮಾಂಸಾಹಾರ ಸೇರಿದಂತೆ ಹಲವಾರು ವಸ್ತುಗಳು ದರ್ಶನ್ ಮತ್ತು ಅವರ ಆಪ್ತರಿಗೆ ಲಭ್ಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಈ ಮಾಹಿತಿ ಪಡೆದುಕೊಂಡು ಕೆಂಡಾಮಂಡಲರಾಗಿರುವ ಗೃಹ ಸಚಿವ ಪರಮೇಶ್ವರ್ ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಂಬಂಧ ಪಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಬಂದಿಖಾನೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಆದೇಶಿಸಿದ್ದಾರೆ.
Previous Articleಮನೆಗೆ ಬರುತ್ತಿರುವ ಎಸ್ಎಂ ಕೃಷ್ಣ.
Next Article ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?


1 Comment
Mostbet: adrenalina, variedade e surpresas em cada partida – https://mostbetpt.pro/ , No Mostbet vocГЄ recebe 100% de bГґnus + 150 free spins para arrasar nos jogos .