ಬೆಂಗಳೂರು,ಜೂ.25-ಚಿತ್ರದುರ್ಗದ ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದ ಸಂಬಂಧ ಬಂಧಿತರಾಗಿ ಜೈಲು ಸೇರಿರುವ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳ ಮೊಬೈಲ್ಗಳ ಡಾಟಾ ರಿಟ್ರೀವ್ ನಡೆಸುತ್ತಿರುವ ಪೊಲೀಸರು ಅದಷ್ಟು ಶೀಘ್ರ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಕೈಗೊಂಡಿದ್ದಾರೆ.
ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡಾಟಾ ರಿಟ್ರೀವ್ ನಡೆಯುತ್ತಿದೆ.
ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸಹ ಮಹತ್ವದ ಕಾರ್ಯ ನಿರ್ವಹಿಸಲಿದ್ದು,ಅದರ ಸಂಗ್ರಹ ಕಾರ್ಯವನ್ನೂ ಸಹ ಪೊಲೀಸರು ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬರೋಬ್ಬರಿ 62 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆ ಶೆಡ್ ಗೆ ಕರೆತಂದಿದ್ದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಇದೀಗ ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿವರೆಗೂ ಕಾರ್ ಮೂಮೆಂಡ್ ಸಿಸಿಟಿವಿ ಸಂಗ್ರಹ ಸಹ ಮಾಡಲಾಗಿದೆ.
ಮೃತದೇಹ ಹೊತ್ತೊಯ್ದ ಕಾರ್ತಿಕ್ ಮತ್ತವನ ಗ್ಯಾಂಗ್ ಒಂದು ಕಾರು, ಪ್ರದೂಶ್ ಮತ್ತು ವಿನಯ್ ಹಿಂದೆ ಹಿಂಬಾಲಿಸಿಕೊಂಡು ಬಂದಿದ್ದರು. ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿವರೆಗೂ ಬರೋಬ್ಬರಿ 36 ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಂಗ್ರಹ ಮಾಡಲಾಗಿದೆ.
ಪಟ್ಟಣಗೆರೆ ಶೆಡ್ ನಿಂದ ಆರ್ ಆರ್ ನಗರ ಮುಖ್ಯರಸ್ತೆ, ನಾಯಂಡಹಳ್ಳಿ ಜಂಕ್ಷನ್ ಗೆ ಬಂದಿದ್ದ ಕಾರುಗಳು, ನಾಯಂಡಹಳ್ಳಿ ಯಿಂದ ಸುಮ್ಮನಹಳ್ಳಿ ಮಾರ್ಗವಾಗಿ ಹೋಗಿದ್ದ ಆರೋಪಿಗಳು, ಸುಮನಹಳ್ಳಿ ಮಾರ್ಗವಾಗಿ ನೇರವಾಗಿ ಹೋಗಿ ರಾಜ್ ಕುಮಾರ್ ರೋಡ್ ನಲ್ಲಿ ತಿರುಗಿದ್ದರು. ಆ ಬಳಿಕ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರಾಜಕಾಲುವೆ ಬಳಿ ಬಂದಿದ್ದ ಆರೋಪಿಗಳು, ಅಪಾರ್ಟ್ಮೆಂಟ್ ರೋಡ್ ನಲ್ಲಿ ಹೋಗಿ ಯೂಟರ್ನ್ ತೆಗೆದುಕೊಂಡಿದ್ದರು,
ಹೀಗೆ ರಸ್ತೆಯ ಕೊನೆಗೆ ಹೋಗಿ ಮತ್ತೆ ಯೂ ಟರ್ನ್ ತೆಗೆದುಕೊಂಡಾಗ ಮೊದಲು ಪಾಸ್ ಆಗಿದ್ದ ಪ್ರದೂಶ್ ಹಾಗೂ ವಿನಯ್ ಕಾಲುವೆಗೆ ಮೊಬೈಲ್ ಬಿಸಾಡಿದ್ದ, ಆ ಬಳಿಕ ಹಿಂದಿದ್ದ ಆರೋಪಿಗಳು ಮೃತದೇಹ ಎಸೆದು ಎಸ್ಕೇಪ್ ಹೋಗುವಾಗ ಒಂದೇ ದಾರಿಯಲ್ಲಿ ಹೋಗಿ ಬರುವಾಗ ಬದಲಿ ಮಾರ್ಗಗಳನ್ನು ಬಳಸಿದ್ದರು.
ತ್ವರಿತ ಗತಿಯಲ್ಲಿ ಪ್ರಕರಣದ ತನಿಖೆ ಮುಗಿಸಲು ಪೊಲೀಸರು ಯೋಜನೆ ಹಾಕಿಕೊಂಡಿದ್ದಾರೆ. ಮುಂದಿನ 50ರಿಂದ 60ದಿನಗಳೊಳಗೆ ಚಾರ್ಜ್ ಶೀಟ್ ಸಿದ್ದತೆಗೆ ಯೋಜನೆ ಹಾಕಲಾಗಿದೆ. 6-8 ತಿಂಗಳ ಒಳಗೆ ವಿಚಾರಣೆ ಪ್ರಕ್ರಿಯೆಯನ್ನೇ ಮುಗಿಸುವ ಆಲೋಚನೆಯಲ್ಲಿದ್ದಾರೆ ಪೊಲೀಸರು. ಪ್ರಕರಣದಲ್ಲಿ ಆರೋಪಿಗಳ ಬಂಧನ ವೇಳೆ ಸಾಕಷ್ಟು ಒತ್ತಡಗಳಿದ್ದವು, ಹಾಗೆಯೇ ತನಿಖೆ ಸಮಯದಲ್ಲಿಯೂ ಸಾಕಷ್ಟು ಒತ್ತಡಗಳು ಬಂದಿದ್ದವು. ಇದನ್ನೆಲ್ಲ ಪರಿಗಣಿಸಿ ಆದಷ್ಟು ತ್ವರಿತವಾಗಿ ಜಾರ್ಜ್ ಶೀಟ್ ಅನ್ನು ಬೇಗನೆ ಹಾಕಲು ಸಿದ್ಧತೆ ನಡೆಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸಲು ತಡ ಮಾಡಿದರೆ ಸಾಕ್ಷ್ಯಗಳ ಮೇಲೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
Previous Articleಸೂರಜ್ ರೇವಣ್ಣ ಪುರುಷತ್ವ ಪರೀಕ್ಷೆ ಹೇಗೆ ನಡೆಯಿತು ಗೊತ್ತಾ..
Next Article ಬೆಂಗಳೂರು ಕೋರ್ಟ್ ಗೆ ಹಾಜರಾದ ಉದಯನಿಧಿ ಸ್ಟಾಲಿನ್.