ಬೆಂಗಳೂರು,ಅ.6- ದಸರಾ ಮೆರವಣಿಗೆ ವೇಳೆ ಬಂದಿದ್ದ ಗ್ಯಾಂಗ್‍ಗಳಿಂದ ಗಲಾಟೆ ಮಾರಾಮಾರಿ ನಡೆದು, ಇಬ್ಬರು ಗಂಭೀರ ಗಾಯಗೊಂಡಿರುವ ಪ್ರತ್ಯೇಕ ಎರಡು ದುರ್ಘಟನೆ ವಿಜಯನಗರ ಹಾಗೂ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಣ್ಣೆ, ಮಾರಕಾಸ್ತ್ರಗಳಿಂದ ಪ್ರತ್ಯೇಕ ಎರಡು ಗ್ಯಾಂಗ್ ಬಡಿದಾಡಿಕೊಂಡ ಘಟನೆಯಲ್ಲಿ ಗಾಯಗೊಂಡಿರುವ ವಿಜಯನಗರದ ಚೇತನ್ ಶೆಟ್ಟಿ, ಹಾಗೂ ಚೇತನ್ ಸೋಮಶೇಖರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಿಬ್ಬರ ಸ್ಥಿತಿ ಗಂಭೀರವಾಗಿದೆ.
ಹಲ್ಲೆ ನಡೆಸಿರುವ ಪುಂಡರ ಗ್ಯಾಂಗ್ ಪರಾರಿಯಾಗಿದ್ದು, ಅವರ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಮಾಗಡಿ ರಸ್ತೆಯ ಠಾಣಾ ವ್ಯಾಪ್ತಿಯ ನವ್ಯ ಬಾರ್ ಮುಂದೆ ಹಾಗೂ ವಿಜಯ ನಗರ ಠಾಣಾ ವ್ಯಾಪ್ತಿಯ ಎಂ.ಆರ್ ಗಾರ್ಡನ್ ಬಾರ್ & ರೆಸ್ಟೋರೆಂಟ್ ಬಳಿ ಗ್ಯಾಂಗ್‍ವಾರ್ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ದೀಪು ಹಾಗೂ ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್, ಹಾಗೂ ವಿಜಯ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ.
Previous Articleಆನೆಮರಿಯ ಪಾಡಿಗೆ ಮರುಗಿದ ರಾಹುಲ್!
Next Article ಪತ್ನಿಯ ಜೊತೆ ಅಸಭ್ಯತೆ-ಸ್ನೇಹಿತನನ್ನು ಕೊಂದು ಕಾಡಿಗೆಸೆದ