ಭುವನೇಶ್ವರ: ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಆದಿವಾಸಿ ಮಹಿಳೆ, ಸಂತಾಲ್ ಸಮುದಾಯದ ದ್ರೌಪದಿ ಮುರ್ಮು ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ.
ಬುಧವಾರ ಮುರ್ಮು ತಮ್ಮ ವಿಧಾನಸಭಾ ಕ್ಷೇತ್ರವಾದ ರಾಯರಂಗಪುರದ ಜಗನ್ನಾಥ ಹಾಗು ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಲ್ಲದೆ, ಹೊರಜಗುಲಿಯಲ್ಲಿದ್ದ ನಂದಿ ಸುತ್ತಲಿನ ಸ್ಥಳ ಸ್ವಚ್ಚಗೊಳಿಸಿದರು. ದೇವಸ್ಥಾನದ ಆವರಣ ಸ್ವಚ್ಚಗೊಳಿಸಿ ದ್ರೌಪದಿ ಮುರ್ಮು ದೇವರ ದರ್ಶನವನ್ನೂ ಪಡೆದರು.
ಸೋಮವಾರ ಬಿಜೆಪಿ ಮಿತ್ರಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಿದ ವಿಚಾರ ತಿಳಿಯುತ್ತಿದ್ದಂತೆ ದ್ರೌಪದಿ ಮುರ್ಮು ಕಣ್ಣೀರಾದರು.
ದೆಹಲಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯ ಅಯ್ಕೆ ಸಭೆಗಳು ನಡೆಯುತ್ತಿದ್ದ ಹೊತ್ತಿನಲ್ಲಿ ಇದಾವುದರ ಪರಿವೆಯೇ ಇಲ್ಲದ ದ್ರೌಪದಿ ಮುರ್ಮು ಒಡಿಶಾದ ಮಯೂರ್‌ಭಂಜ್‌ನ ಮಹುಲ್ದಿಯಾದ ತಮ್ಮ ಮನೆಯಲ್ಲಿದ್ದರು. ದ್ರೌಪದಿ ಮುರ್ಮು ಅವರೊಂದಿಗೆ ಮಗಳು ಇತಿಶ್ರೀ ಕೂಡ ಇದ್ದರು.
ನನ್ನ ಪಾಲಿಗೆ, ಬುಡಕಟ್ಟು ಜನರ ಪಾಲಿಗೆ ಕೊನೆಗೆ ಮಹಿಳೆಯರ ಪಾಲಿಗೆ ಇದು ಐತಿಹಾಸಿಕವಾದದ್ದು ಎಂದು ದ್ರೌಪದಿ ಮುರ್ಮು ಹೇಳಿದರು.
Previous Articleಧೋನಿ ನಿರ್ಮಾಣದ ಚಿತ್ರದಲ್ಲಿ ದಳಪತಿ ವಿಜಯ್ ಹೀರೋ?!
Next Article ವಿಕ್ರಾಂತ್ ರೋಣ’ 3D ಟ್ರೈಲರ್ ರಿಲೀಸ್ ಇವೆಂಟ್