ಮೈಸೂರು Aug29 : POSCO ಪ್ರಕರಣದಲ್ಲಿ 24 ಗಂಟೆಯೊಳಗೆ ಸಂತ್ರಸ್ತರ ಹೇಳಿಕೆಯನ್ನು CRPC ಸೆಕ್ಷನ್ 164ರ ಅಡಿ ದಾಖಲಿಸಬೇಕಿತ್ತು. ಆದರೆ 52 ಗಂಟೆ ಕಳೆದರೂ ಇದುವರೆಗೂ ಹೇಳಿಕೆ ದಾಖಲಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಒಡನಾಡಿ ಸಂಸ್ಥೆಯ ಪರಶು ಹೇಳಿದ್ದಾರೆ.
ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ನಾನು ನಂಬಿದ್ದ ಸ್ವಾಮೀಜಿ ವಿಕೃತಕಾಮಿ ಆಗಿದ್ದು ಹೇಗೆ ಎಂಬುದರ ಬಗ್ಗೆ ನನಗೆ ಆತಂಕವಾಗಿದೆ ಶರಣರ ಬಂಧನ ಆಗಿದೆಯೋ ಇಲ್ಲವೋ ಎಂಬುವುದು ನನಗೆ ಗೊತ್ತಿಲ್ಲ. ಮಕ್ಕಳಿಗೆ ಅದೆಷ್ಟು ಬಾರಿ ಕೌನ್ಸಿಲಿಂಗ್ ಮಾಡುತ್ತಾರೆ. ಈ ಪ್ರಕರಣದ ಬೆನ್ನಲ್ಲೇ ಸುಮಾರು 30 ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ ಅಂದ್ರೆ ಅಲ್ಲಿಯ ಜನರಿಗೆ ತನಿಖಾಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದರ್ಥ ಅಲ್ಲವಾ ಎಂದು ಸ್ಪೋಟಕ ಹೇಳಿಕೆ ನೀಡಿದರು.
:ರಾಜಿ ಇಲ್ಲ
ನನ್ನ ಹೆಗಲ ಮೇಲೆ ಯಾರೂ ಬಂದೂಕು ಇರಿಸಲು ಸಾಧ್ಯವಿಲ್ಲ. ಮಕ್ಕಳು ನನ್ನ ಬಳಿ ಬಂದಾಗ ಅವರ ಧ್ವನಿಯನ್ನು ಕೇಳಿದ್ದೇವೆ. ತಂದೆಯಾದವನು ವಿಕೃತಿ ಆಗಿರೋದು ಕೇಳಿ ಶಾಕ್ ಆಗಿತ್ತು. ನಾನು ಯಾರ ಜೊತೆಯೂ ರಾಜಿ ಆಗಲ್ಲ. ಬೇಕಾದ್ರೆ ನನ್ನ ಸಂಸ್ಥೆ ಇಂದೇ ಮುಚ್ಚಿ ಹೋದರೂ ನನಗೆ ಚಿಂತೆ ಇಲ್ಲ ಎಂದು ಹೇಳಿದರು.
Previous Articleಬಿಜೆಪಿ, ನಿಮ್ಮ ಹತ್ತಿರ ಇದೆಯಾ ಉತ್ತರ..?
Next Article ಕೋವಿಡ್ ಹೆಚ್ಚಳ – ಮಾಸ್ಕ್ ಕಡ್ಡಾಯ..