ನವದೆಹಲಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಂಡ ಐಪಿಎಲ್ ಟ್ರೋಪಿ ಗೆದ್ದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದೆ. ಅದರಲ್ಲೂ ಟ್ರೋಪಿ ಗೆದ್ದ ತಂಡಕ್ಕೆ ರಾಜ್ಯ ಸರ್ಕಾರ ನೀಡಿದ ಅಭಿನಂದನೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ಇದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ.
ವಿಜಯೋತ್ಸವ ಸಮಾರಂಭ ಆಚರಣೆ ವೇಳೆ ನಡೆದ ಕಾಲ್ತುಳಿತ ಮತ್ತು ಶಿಷ್ಟಾಚಾರ ಉಲ್ಲಂಘನೆ ಆರೋಪ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಇದರಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ.
ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಐಪಿಎಲ್ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಬಂದಿದೆ ಹೀಗಾಗಿ ಆರ್‌ಸಿಬಿ ತಂಡವನ್ನು ಅವರು ಖರೀದಿಸಲಿದ್ದಾರೆ ಎಂಬ ಸುದ್ದಿಗಳು ಹರಾಡತೊಡಗಿವೆ.
ಈ ಕುರಿತಂತೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಕ್ರಿಕೆಟ್ ಬಗ್ಗೆ ನನಗೆ ಆಸಕ್ತಿ ಇದೆ ಹಾಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಸದಸ್ಯನಾಗಿದ್ದೇನೆ ಇದು ನನಗೆ ಸಾಕು ಆರ್ ಸಿ ಬಿ ತಂಡವನ್ನು ಖರೀದಿಸಲು ನಾನೇನು ಹುಚ್ಚ ಅಲ್ಲ ಎಂದು ಹೇಳಿದರು.
ನನಗೆ ಈಗಾಗಲೇ ಸಾಕಷ್ಟು ವ್ಯವಹಾರಗಳಿವೆ ಶಿಕ್ಷಣ ಸಂಸ್ಥೆಗಳಿವೆ ಅದನ್ನು ನೋಡಿಕೊಂಡರೆ ಸಾಕಾಗಿದೆ ಇವುಗಳೆಲ್ಲ ನನಗೆ ಬೇಕಾಗಿಲ್ಲ ಇಂತಹದನ್ನು ಖರೀದಿ ಮಾಡಲು ನಾನೇನು ಹುಚ್ಚನಲ್ಲ ಎಂದು ಪುನರುಚ್ಚರಿಸಿದ್ದಾರೆ
Previous ArticleKpcc ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಏನು ಹೇಳಿದರು ಗೊತ್ತಾ ?
Next Article ಜಾತಿವಾರು ಗಣತಿ ಹೊಸ ಸಮೀಕ್ಷೆಗೆ ನಿರ್ಧಾರ.
