ಬೆಂಗಳೂರು,ಜೂ.21-
ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂದು
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳತಿ
ಪವಿತ್ರಾ ಗೌಡ ಇದೀಗ ಖೈದಿ ನಂಬರ್ 6024.
ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ಜೈಲಿನಲ್ಲಿ
ಡಿ ಬ್ಯಾರಕ್ ಸಿಕ್ಕಿದ್ದು,ಕೈದಿ ನಂಬರ್ 6024 ಸಂಖ್ಯೆಯನ್ನು ನೀಡಲಾಗಿದೆ.
ಪ್ರಕರಣದ ಉಳಿದ ಆರೋಪಿಗಳನ್ನು ಜೈಲಿನ ಕ್ವಾರೆಂಟೈನ್ ಬ್ಯಾರಕ್ನಲ್ಲಿ ಇಡಲಾಗಿದೆ. ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಆಕೆ ಎರಡು ದಿನದಿಂದ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ,ರಾತ್ರಿ 11ರ ವೇಳೆ ನಿದ್ರೆಗೆ ಜಾರಿದ್ದಾರೆ. ಆದರೆ ಸರಿಯಾಗಿ ನಿದ್ದೆ ಮಾಡದೆ ಆಗಾಗ ಎದ್ದು ಕುಳಿತು ಯೋಚನೆ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್ ಬಳಿ ವಾಕಿಂಗ್ ಮಾಡಿ ಜೈಲಿನ ಸಿಬ್ಬಂದಿ ನೀಡಿದ ಕಾಫಿಯನ್ನು ಕುಡಿದು ದಿನಪತ್ರಿಕೆ ಓದಿದ ಅವರಿಗೆ ಜೈಲಿನ ಮೆನುವಿನಂತೆ ತಿಂಡಿಗೆ ಉಪ್ಪಿಟ್ಟು ನೀಡಲಾಗಿದೆ.
ಕೋರ್ಟ್ನಲ್ಲಿ ವಿಚಾರಣೆ ಮುಗಿಸಿ ಪವಿತ್ರಾ ಪೊಲೀಸ್ ವ್ಯಾನ್ ಹತ್ತಿದಾಗ ಅವರನ್ನು ನೋಡಲು ಪುತ್ರಿ ಖುಷಿ ಗೌಡ ಆಗಮಿಸಿದ್ದು, ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಅಕೆ ಹರಸಾಹಸ ಪಡಬೇಕಾಯಿತು. ಪವಿತ್ರಾ ಗೌಡ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್ ವ್ಯಾನ್ನ ಪಕ್ಕದಲ್ಲಿ ನಿಂತು ಮಾತನಾಡಿದ್ದರು.ಈಗ
ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪವಿತ್ರಾ ಗೌಡ ಮಗಳು ಮತ್ತು ತಾಯಿ ಸೇರಿದಂತೆ ಕುಟುಂಬದವರು ಆಕೆಯನ್ನು ಭೇಟಿಯಾಗಿದ್ದಾರೆ.
Previous Articleದರ್ಶನ್ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ನಂಟು.
Next Article ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಕಟ್ಟಪ್ಪಣೆ.

2 Comments
Betano is waar dromen uitkomen. Pak direct 100% tot €500 en 200 gratis spins https://betanogame.org/nl/. Speel top-beoordeelde spellen van de beste providers ter wereld altijd op mobiel. Klaar om te winnen?
No Mostbet vocГЄ joga com estilo e comeГ§a sempre com o pГ© direito – https://mostbetpt.pro/mostbet-app/ , Mostbet te entrega 125% de bГґnus + 300 giros grГЎtis – aproveite jГЎ .