ಬೆಂಗಳೂರು,ಜೂ.25-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರಾದ ಕಿರಣ, ಶರತ್ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಪ್ರಕರಣ ಕೂಡ ಪ್ರಜ್ವಲ್ ರೇವಣ್ಣ ಅವರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ,ಐಪಿಸಿ ಸೆಕ್ಷನ್ 354(ಎ) ಲೈಗಿಂಕ ಕಿರುಕುಳ, 354(ಡಿ) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(ಬಿ) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆ್ಯಕ್ಟ್ ಅಡಿಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳೆಯರ ಖಾಸಗಿ ದೃಶ್ಯಗಳ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಬಹಿರಂಗ ಪಡಿಸಿದಕ್ಕೆ ಐಟಿ ಕಾಯಿದೆ ಸೆಕ್ಷನ್ 66ಇ ಎಫ್ಐಆರ್ನಲ್ಲಿ ಸೇರಿಸಲಾಗಿದೆ. ಪ್ರಕರಣದಲ್ಲಿ ಪ್ರೀತಂ ಗೌಡ ಎ4 ಆಗಿದ್ದಾರೆ. ಪ್ರೀತಂ ಗೌಡ ವಿರುದ್ಧ ಪೆನ್ ಡ್ರೈವ್ ಖರೀದಿ ಮಾಡಿಸಿದ ಬಳಿಕ ಹಂಚಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೀತಂ ಗೌಡ ಅವರಿಗೆ ಎಸ್ಐಟಿ ಯಾವುದೇ ಕ್ಷಣದಲ್ಲಾದರೂ ನೋಟಿಸ್ ನೀಡುವ ಸಾಧ್ಯತೆ ಇದೆ.
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ನಾಲ್ಕು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ಪಡೆದುಕೊಂಡಿದೆ. ಜೂನ್ 29ರವರೆಗೂ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ
Previous Articleಬೆಂಗಳೂರು ಕೋರ್ಟ್ ಗೆ ಹಾಜರಾದ ಉದಯನಿಧಿ ಸ್ಟಾಲಿನ್.
Next Article ಪವಿತ್ರಾಗೌಡನಿಗೆ Lipstickಕೊಟ್ಟವರಾರು.?