ಬೆಂಗಳೂರು,ಮೇ.1-
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಾಧಾರ ಗಳಿಲ್ಲದೆ ಏಕಾಏಕಿ ಯಾರನ್ನು ಬಂಧಿಸುವುದಿಲ್ಲ ಎಂದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೆನ್‌ಡ್ರೈವ್ ಪ್ರಕರಣದಲ್ಲಿ ಸೂಕ್ಷ್ಮ ವಿಚಾರಗಳಿವೆ ಬಹಳಷ್ಟು ಮಂದಿಯ ಜೀವನದ ಪ್ರಶ್ನೆ ಅಡಗಿದೆ. ಈ ಕಾರಣಕ್ಕಾಗಿಯೇ ಎಸ್‌ಐಟಿಯ ತನಿಖೆಗೆ ಆದೇಶಿಸಲಾಗಿದೆ. ಸಾಕ್ಷಿ ಪುರಾವೆಗಳನ್ನು ನೋಡದೆ ಏಕಾಏಕಿ ರೇವಣ್ಣ ಅಥವಾ ಯಾರನ್ನೇ ಆಗಲಿ ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಸರ್ಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ, ಆ ರೀತಿ ಏಕಾಏಕಿ ಕ್ರಮ ತೆಗೆದುಕೊಳ್ಳುವುದು ಸೂಕ್ತ ಅಲ್ಲ. ಸೂಕ್ಷ್ಮ ಪ್ರಕರಣವಾಗಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಎಚ್ಚರಿಕೆಯಿಂದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವುದು ವಿಮಾನದ ಟಿಕೆಟ್‌ಗಳಿಂದ ಪತ್ತೆಯಾಗಿದೆ. ಅವರನ್ನು ವಾಪಸ್ ಕರೆತರಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಎಸ್‌ಐಟಿ ಕೈಗೊಳ್ಳಲಿದೆ. ಅಗತ್ಯವಾದರೆ ಕೇಂದ್ರ ಸರ್ಕಾರದ ಸಹಾಯವನ್ನು ಪಡೆಯಲಿದೆ ಎಂದರು
ಪ್ರಕರಣದಲ್ಲಿ ಎ ಒನ್ ಆರೋಪಿಯಾಗಿರುವ ರೇವಣ್ಣ ಅವರನ್ನು ಏಕೆ ಬಂಧಿಸಿಲ್ಲ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ವಿಡಿಯೋ ಬಿಡುಗಡೆ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂಬ ಟೀಕೆಗಳನ್ನು ಗಮನಿಸಿದ್ದೇನೆ. ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದಾಗಿ ಈ ಹಂತದಲ್ಲಿ ನಾನು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಬೇರೆಯವರು ಈ ವಿಚಾರವನ್ನು ಚರ್ಚಿಸುವುದು ಸೂಕ್ತವಲ್ಲ. ಆರೋಪಗಳು, ಒತ್ತಡಗಳು, ಟೀಕೆಗಳನ್ನು ಆಧರಿಸಿ ಏಕಾಏಕಿ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು
ಹಾಗೆಯೇ ಯಾರನ್ನೂ ರಕ್ಷಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ನೇಹಾ ಪ್ರಕರಣದಲ್ಲಿ ಬೊಬ್ಬೆ ಹೊಡೆದಿದ್ದ ಬಿಜೆಪಿಯವರು ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ವೌನವಾಗಿರುವುದು ಮತ್ತು ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ನಮಗೆ ಸಂಬಂಧಟಪ್ಟ ವಿಚಾರಗಳಲ್ಲ. ಆ ಎರಡೂ ಪಕ್ಷಗಳಿಗೆ ಸೇರಿದ ವಿಷಯ ಎಂದು ಹೇಳಿದರು
Previous Articleರಾಮನಗರ ಕಾಂಗ್ರೆಸ್ ಶಾಸಕನಿಗೆ ಗಂಡಾಂತರ.
Next Article ವಿಚಾರಣೆಗೆ ಬರಲು ಪ್ರಜ್ವಲ್ ರೇವಣ್ಣನಿಗೆ ಸಮಯ ಬೇಕಂತೆ.