ಬೆಂಗಳೂರು,ಮೇ.27-
ಅತ್ಯಾಚಾರ ಅಪಹರಣದಲ್ಲಿ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಮಂತ್ರಿ ಎಚ್ ಡಿ ರೇವಣ್ಣ ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ನಲ್ಲಿ ಬರೋಬ್ಬರಿ ಎರಡು ಸಾವಿರ ಮಹಿಳೆಯರ ಆಶ್ಲೀಲ ಚಿತ್ರಗಳು ವಿಡಿಯೋಗಳಿದ್ದವು.
ಈ ವಿವರಗಳನ್ನು ಪ್ರಜ್ವಲ್ ರೇವಣ್ಣ ಅವರ ಕಾರಿನ ಮಾಜಿ ಚಾಲಕ ಕಾರ್ತಿಕ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ
ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಕೋರ್ಟಿಗೆ ಹಾಜರಾದ ಕಾರ್ತಿಕ್ಈ ಕುರಿತಂತೆ ವಿವಾರವಾದ ಸಾಕ್ಷಿ ನೀಡಿದ್ದಾರೆ ನುಡಿದಿದ್ದಾರೆ.
ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಮಾಜಿ ಚಾಲಕ ಕಾರ್ತಿಕ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿ ಅಶ್ಲೀಲ ದೃಶ್ಯಾವಳಿಗಳು ಸಿಕ್ಕಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
2009 ರಿಂದ ನಾನು ಹೆಚ್.ಡಿ.ರೇವಣ್ಣ ಬಳಿ ಕಾರು ಚಾಲಕನಾಗಿದ್ದೆ. ನಂತರ ಭವಾನಿ ರೇವಣ್ಣ, ಸೂರಜ್ ರೇವಣ್ಣ ಕಾರಿಗೂ ಚಾಲಕನಾಗಿದ್ದೆ. 2018 ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿ ಕೆಲಸ ಮಾಡಿ ಕ್ಷೇತ್ರ ಸಂಚಾರ ಮಾಡುತ್ತಿದ್ದೆ.
ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು.ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು.
ಒಂದು ಬಾರಿ ಅವರು ಬೆಂಗಳೂರಿನಲ ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು. ಪ್ರಜ್ವಲ್ ರೇವಣ್ಣ ಮೊಬೈಲ್ ಪಾಸ್ ವರ್ಡ್ ನನಗೆ ತಿಳಿದಿತ್ತು.
ಕುತೂಹಲದಿಂದ ಮೊಬೈಲ್ ತೆಗೆದು ನೋಡಿದಾಗ ಮೊಬೈಲಿನಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳಿದ್ದವು. ಪ್ರಜ್ವಲ್ ರೇವಣ್ಣ ಲೈಂಗಿಕ ಕ್ರಿಯೆ ನಡೆಸುತ್ತಿರುವ ಹಲವು ವಿಡಿಯೋಗಳು ಸೆರೆಯಾಗಿದ್ದವು.
ಈ ರೀತಿಯ ಸುಮಾರು 2ಸಾವಿರ ಅಶ್ಲೀಲ ಫೋಟೋ, 30 ರಿಂದ 40 ಮಹಿಳೆಯರ ಅಶ್ಲೀಲ ವಿಡಿಯೋಗಳಿದ್ದವು. ಈ ವಿಡಿಯೋ ಮತ್ತು ಫೋಟೋಗಳು ಪಕ್ಷವೊಂದರ ಕಾರ್ಯಕರ್ತೆಯರು, ಅವರು ಗೆಳತಿಯರು ಇತ್ಯಾದಿಯವರಿಗೆ ಸಂಬಂಧಿಸಿದ್ದಾಗಿದೆ. ಆ ವಿಡಿಯೋಗಳನ್ನು ಭವಾನಿ ರೇವಣ್ಣರಿಗೆ ತೋರಿಸಲೆಂದು ವರ್ಗಾಯಿಸಿಕೊಂಡೆ.
ಮಗನಿಗೆ ಬುದ್ದಿ ಹೇಳಲಿ ಎಂದು ಭವಾನಿ ರೇವಣ್ಣರಿಗೆ ಮಾಹಿತಿ ನೀಡಿದ್ದೆ.
ಅದರಂತೆ ಭವಾನಿ ರೇವಣ್ಣ ಅವರಿಗೆ ವಿಷಯ ತಿಳಿಸಿದೆ ಅವರು ಫೋಟೋ, ವಿಡಿಯೋ ತಮಗೆ ಕಳುಹಿಸಲು ಕೋರಿದ್ದರು. ಬೇರೆಲ್ಲೂ ಈ ವಿಷಯ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ಅವರು ರೇವಣ್ಣ ಪ್ರಜ್ವಲ್ ಜೊತೆ ಮಾತು ಬಿಟ್ಟಿದ್ದರು.
ಹುಟ್ಟುಹಬ್ಬಕ್ಕೆ ಭವಾನಿ ಶುಭ ಕೋರಿದಾಗ ಪ್ರಜ್ವಲ್ ಪ್ರತಿಕ್ರಿಯೆ ನೀಡಿರಲಿಲ್ಲ. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಭವಾನಿ ನನ್ನ ಹೆಸರು ಹೇಳಿದ್ದರು. ಆಗ ಫೋನ್ ಮಾಡಿ ಪ್ರಜ್ವಲ್ ತನಗೆ ಜೋರು ಮಾಡಿದ್ದರು. ನಮ್ಮ ನಡುವೆ ಜಗಳವಾಗಿ 2022 ರಲ್ಲಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧ ಪ್ರಕರಣ ಕೂಡಾ ದಾಖಲಿಸಿದ್ದೆ. ನಂತರ ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು.
ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ನಾನು ಸಂಪರ್ಕಿಸಿದ್ದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್‌ನಲ್ಲಿ ನೀಡಿದ್ದೆ. ಆದರೆ ಚುನಾವಣೆ ವೇಳೆ ಈ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಹೇಳಿದರು.
Previous Articleಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
Next Article ಹಣ ಪಡೆಯದೆ ರಾಯಭಾರಿಯಾದ ಕುಂಬ್ಳೆ.

1 Comment
Der Bouclier Apextrail-Anbieter zeichnet sich aus durch seine revolutionare und hochmoderne Krypto-Investitionsplattform, die die Fahigkeiten von KI einsetzt, um ihren Usern ma?gebliche Konkurrenzvorteile zu verschaffen.