Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರಿಯಾಂಕ್ ಖರ್ಗೆ ಆಟ ಆಡಲು ವಿದೇಶಕ್ಕೆ ಹೋದರಾ..!
    ರಾಜಕೀಯ

    ಪ್ರಿಯಾಂಕ್ ಖರ್ಗೆ ಆಟ ಆಡಲು ವಿದೇಶಕ್ಕೆ ಹೋದರಾ..!

    vartha chakraBy vartha chakraJune 19, 2025Updated:June 19, 2025No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.19:
    ನಾವು ಆಟ ಆಡಲು ವಿದೇಶಕ್ಕೆ ಹೋಗುತ್ತಿಲ್ಲ. ರಾಜ್ಯದ ಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಳಿತಾದರೆ, ದೇಶಕ್ಕೂ ಒಳಿತು. ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ ಹೀಗಿದ್ದರೂ ಕೇಂದ್ರ ಸರ್ಕಾರ ನಮಗೆ ಅಡ್ಡಿ ಮಾಡುತ್ತಿದೆ.
    ಇದು ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಿ ಪ್ರಿಯಾಂಕ ಖರ್ಗೆ ಅವರ ನೇರ ಆರೋಪ.
    ಬಂಡವಾಳ ಹೂಡಿಕೆ ಪ್ರಸ್ತಾಪಗಳೊಂದಿಗೆ ಉದ್ಯಮಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸಲು ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಪ್ರವಾಸ ಮೊಟುಕುಗಳಿಸಿ ಬೆಂಗಳೂರಿಗೆ ಹಿಂತಿರುಗಿದರು.
    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಿಯೋಗಕ್ಕೆ ವಿದೇಶ ಪ್ರವಾಸ ಕೈಗೊಳ್ಳಲು ನೀಡಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ, ತಿರಸ್ಕಾರ ಮಾಡಲಿ, ಆದ್ರೆ ಅದಕ್ಕೆ ಕಾರಣ ಕೊಡಬೇಕು ಎಂದು ಹೇಳಿದರು
    ʻಮೇಕ್ ಇನ್ ಇಂಡಿಯಾʼ ಅಂತಾ ದೊಡ್ಡ ದೊಡ್ಡ ಮಾತುಗಳು ಹೇಳ್ತಾರೆ. ಯಾವುದೇ ಘೋಷಣೆ ಕೊಟ್ಟರೂ ಅದು ಪ್ರಾರಂಭವಾಗಬೇಕಿರೋದು ಕರ್ನಾಟಕದಿಂದ್ಲೇ. ನಮ್ಮಲ್ಲಿ ಅಷ್ಟೊಂದು ಮಾನವ ಸಂಪನ್ಮೂಲ ಹಾಗೂ ಅರ್ಹತೆ ಇದೆ ಈ ಸತ್ಯ ಗೊತ್ತಿದ್ದು ಕರ್ನಾಟಕಕ್ಕೆ ಒಳ್ಳೆಯದಾಗಬಾರದು ಎಂದು ದುರುದ್ದೇಶದಿಂದ ಅನುಮತಿ ನಿರಾಕರಿಸಿದೆ ಎಂದು ಆಪಾದಿಸಿದರು
    ವಿದೇಶಿ ಪ್ರವಾಸಕ್ಕೆ ಮೊದಲಿಗೆ ನಿಯೋಗಕ್ಕೆ ಅನುಮತಿ ನೀಡದ ಕೇಂದ್ರ, ನಂತರ ಕೆಲವರಿಗೆ ಅನುಮತಿ ನೀಡಿತು. ಆದರೆ,ನನಗೆ ಅನುಮತಿ ನಿರಾಕರಿಸಿತು. ‘ಈ ಎಲ್ಲ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ನಿರ್ಧಾರ ಸರಿಯಲ್ಲ, ಇದರ ಬಗ್ಗೆ ಮುಂದೆ ಮಾತನಾಡುವೆ ಎಂದು ಹೇಳಿದರು
    ನಾವು ಆಟ ಅಡೋದಕ್ಕೆ ಅಲ್ಲಿಗೆ ಹೋಗ್ತಿಲ್ಲ, ಜನರಿಗೆ ಉದ್ಯೋಗ ಸೃಷ್ಟಿ ಮಾಡೋದು ನಮ್ಮ ಕರ್ತವ್ಯ. ಬಂಡವಾಳ ತರೋದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆದಾದ್ರೆ ನಮ್ಮ ರಾಷ್ಟ್ರಕ್ಕೆ ತಾನೆ ಒಳ್ಳೆದು, ಕರ್ನಾಟಕ ದೇಶದ ಅರ್ಥಿಕತೆಯ ಎಂಜಿನ್‌. ವಿನಾಃ ಕಾರಣ ಸಾರಸಾಗಟಾಗಿ ತಿರಸ್ಕಾರ ಮಾಡೋದು ಸರಿಯಲ್ಲ ಎಂದರು .
    ಹೋದ ಬಾರಿ ನಾವು ಎಂ.ಬಿ ಪಾಟೀಲ್ ಅವರು ಅಮೆರಿಕಗೆ ಹೋಗಿದ್ವಿ. ಆಗ 35 ರಿಂದ 40 ಸಾವಿರ ಕೋಟಿ ಲೆಟರ್ ಆಫ್ ಇಂಟೆಂಟ್ ಹಾಗೂ ಎಂಓಯೂ ಗಳಾಗಿದ್ವು. ಅದನ್ನ ಇನ್ವೆಸ್ಟ್ ಕರ್ನಾಟಕದಲ್ಲಿ ಸಾಲಿಡಿಫೈ ಮಾಡಿದ್ವಿ. ಮೊನ್ನೆ ಸೆಮಿಕಂಡಕ್ಟರ್ ಮತ್ತೆ ಎಲೆಕ್ಟ್ರಾನಿಕ್ಸ್ ಮ್ಯಾನಿಫಾಕ್ಚರ್‌ಗೆ ಸುಮಾರು 20 ಸಾವಿರ ಕೋಟಿ ರೂ ಅನುಮೋದನೆ ಕೊಟ್ಟಿದ್ದೀವಿ. ಇದರ ಪ್ರತಿಫಲವಾಗಿ ಕರ್ನಾಟಕ ಎಲೆಕ್ಟ್ರಾನಿಕ್ಸ್ ಹಬ್ ಹಾಗೂ ಏರೋಸ್ಪೇಸ್ ಹಬ್ ಆಗಿದೆ. ನವೋದ್ಯಮದಲ್ಲಿ ಅಗ್ರಸ್ಥಾನ ಪಡೆದು ಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

    ಕರ್ನಾಟಕ ತಂತ್ರಜ್ಞಾನ Bengaluru ಸರ್ಕಾರ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಡಿಕೆ ಸುರೇಶ್ ಕನಸು ನನಸಾಗಲು ಒಂದೇ ಮೆಟ್ಟಿಲು ಬಾಕಿ.
    Next Article ಬೆಂಗಳೂರಿನ ಪಬ್,ಬಾರ್ ಗಳಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ?
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • thfj0 on ಸಂಚಾರ ಉಲ್ಲಂಘನೆ ದಂಡ ಪಾವತಿಗೆ ನಾಳೆಯಿಂದ 11ದಿನ 50ರಷ್ಟು ರಿಯಾಯಿತಿ #traffic
    • 3o3n8 on ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ | Karnataka
    • arenda_yahty_ifKr on ಒಂದೂವರೆ ಸಾವಿರ ಕೋಟಿ ಮೌಲ್ಯದ ಅರಣ್ಯ ಒತ್ತುವರಿ ತೆರವು.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe