ಬೆಂಗಳೂರು ಅ, 11-
ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಕುತ್ತಿಗೆಗೆ ನಕಲಿ ಐಡಿ ಕಾರ್ಡ್,ಕೈಯಲ್ಲಿ ಮೈಕ್ ಹಿಡಿದು ಜನರನ್ನು ಸುಲಿಗೆ ಮಾಡುವುದು ಹೆದರಿಸುವುದು, ಹಣ ವಸೂಲಿ ಮಾಡುವುದು ಮಾಮೂಲಿಯಾಗಿದೆ ಹೀಗೆ ಸುಲಿಗೆ ಮಾಡುತ್ತಿದ್ದ ಆರೋಪಿ ಮಹಮ್ಮದ್ ಶಫಿ ಎಂಬ ನಕಲಿ ಪತ್ರಕರ್ತರನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಈತ ಸಂಘಟನೆಯ ಜತೆಗೆ ಯೂಟ್ಯೂಬ್ನಲ್ಲಿ ನ್ಯೂಸ್ ಚಾನಲ್ವೊಂದನ್ನು ಮಾಡಿಕೊಂಡು, ಕುತ್ತಿಗೆ ಐಡಿ ಕಾರ್ಡ್, ಪ್ರಜಾಪರ ಟಿವಿ ಎಂಬ ಕೈಯಲ್ಲಿ ಲೋಗೋ ಹಾಗೂ ಮೊಬೈಲ್ ಹಿಡಿದು ಪತ್ರಕರ್ತನಾಗಿರುವ ಮಹಮ್ಮದ್ ಶಫಿ, ತನ್ನ ಅಸಿಸ್ಟೆಂಟ್ ಜತೆಗೆ ನ್ಯೂಸ್ ರಿಪೋಟ್ ಗೆ ಎಂದು ಹೊರಟರೆ ಅಂದು ರೋಲ್ ಕಾಲ್ ಫಿಕ್ಸ್ ಅಂತಲೇ ಅರ್ಥ.
ಆರೋಪಿ ಮಹಮ್ಮದ್ ಶಫಿ ತಾನು ಪತ್ರಕರ್ತ ಎಂದು ಪ್ರಜಾಪರ ಟಿವಿಯ ಲೋಗೋ ಹಿಡಿದು ಹುಳಿಮಾವು ಬಳಿ ರಮೇಶ್ ಎಂಬುವವರ ಒಡೆತನದಲ್ಲಿರುವ ಎಸ್ಎಲ್ವಿ ಬೇಕರಿಗೆ ಬಂದಿದ್ದು ಬೇಕರಿಯಲ್ಲಿ ಕ್ಲೀನಿಂಗ್ ವೇಳೆ ಒಳಗೆ ನುಗ್ಗಿ ಕ್ಲೀನ್ ಮಾಡುವುದನ್ನು ವಿಡಿಯೊ ಮಾಡಿಕೊಂಡಿದ್ದ. ನಂತರ ಅಲ್ಲಿದ್ದ ಸಿಬ್ಬಂದಿ ಮುಂದೆ ಕೂಗಾಡುತ್ತಾ ಫುಡ್ ಕ್ಲೀನ್ ಇಲ್ಲ, ತಯಾರಿಸುವ ಸ್ಥಳ ಸ್ವಚ್ಚವಿಲ್ಲ ಎಂದು ಕ್ಯಾತೆ ತೆಗೆದಿದ್ದ. ಎಲ್ಲಿ ಕ್ಲೀನ್ ಮಾಡುತ್ತಾರೋ, ಕಸ ಒಟ್ಟು ಮಾಡುತ್ತಾರೋ ನಿರ್ದಿಷ್ಟವಾಗಿ ಅಲ್ಲಿಯ ವಿಡಿಯೊ ತೆಗೆಯುತ್ತಿದ್ದ. ನಂತರ ತಾನು ಪ್ರೆಸ್ ರಿಪೋರ್ಟರ್ ಈ ಸುದ್ದಿನ ನ್ಯೂಸ್ ಚಾನಲ್ ನಲ್ಲಿ ಹಾಕುತ್ತಿನಿ ನಂತರ ಆಟೋಮ್ಯಾಟಿಕ್ ಆಗಿ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ ಎಂದು ಹೆದರಿಸುತ್ತಿದ್ದ ನಂತರ ಸುದ್ದಿ ಹಾಕಬಾರದು ಅಂದರೆ 50 ಸಾವಿರ ಕೊಡಬೇಕು ಇಲ್ಲದಿದ್ದರೆ, ನಂಗೆ ಲೋಕಲ್ ಎಎಲ್ಎ , ಬಿಡಿಎ ಅಧಿಕಾರಿಗಳು , ಫುಡ್ ಆಫೀಸರ್ಗಳೆಲ್ಲರೂ ಗೊತ್ತು . ನೀನು ಹೇಗೆ ಬೇಕರಿ ನಡಿಸ್ತಿಯಾ ನೋಡ್ತಿನಿ ಎಂದು ಧಮ್ಕಿ ಹಾಕಿ ರಮೇಶ್ ರವರಿಂದ ಗೂಗಲ್ ಪೇ ನಲ್ಲಿ ಹತ್ತು ಸಾವಿರ ಹಣವನ್ನು ಪಡೆದು ನಂತರ ಜಾಗ ಖಾಲಿ ಮಾಡಿದ್ದಾನೆ.
ನಂತರ ಈ ವಿಷಯದ ಬಗ್ಗೆ ರಮೇಶ್ ಬೇಕರಿ ಅಸೋಸಿಯೇಷನ್ ಗೆ ಹೇಳಿದಾಗ ಸುಮಾರು ನಲವತ್ತು ಐವತ್ತು ಜನರಿಗೆ ಇದೇ ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಹುಳಿಮಾವು ಪೊಲೀಸರು ನಕಲಿ ಪ್ರೆಸ್ ರಿಪೋರ್ಟರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ . ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


1 Comment
betmgm Wisconsin online casino betmgm play mgm bet login