ಬೆಂಗಳೂರು,ಮೇ.28-
ಮಾದಕವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಈಶಾನ್ಯ ವಿಭಾಗದ ಪೊಲೀಸರು ಬಟ್ಟೆ ವ್ಯಾಪಾರದ ನೆಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ನನ್ನು ಬಂಧಿಸಿ 3 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆ ಪೇಪೆ ಮೋರೆಪೇಯಿ(43) ಬಂಧಿತ ಡ್ರಗ್ ಪೆಡ್ಲರ್ ಆಗಿದ್ದಾನೆ,ವ್ಯಾಪಾರಿ ವೀಸಾದಲ್ಲಿ ನಗರಕ್ಕೆ ಬಂದು ಹೆಬ್ಬಾಳದ
ಟಾಟಾನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಯು ಸಿದ್ದ ಉಡುಪುಗಳ ಮಾರಾಟದಲ್ಲಿ ತೊಡಗಿರುವುದಾಗಿ ಹೇಳುತ್ತಿದ್ದ.
ಮೇಲ್ನೋಟಕ್ಕೆ ಒಂದೆರಡು ಬಟ್ಟೆಗಳನ್ನು ಇಟ್ಟುಕೊಂಡು ಅದನ್ನು ರಫ್ತು ಮಾಡುವುದಾಗಿ ಹೇಳುತ್ತಿದ್ದ ಈತ ಸುಲಭವಾಗಿ ಹಣಗಳಿಸಲು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮೇ.20 ರಂದು ಅಮೃತಹಳ್ಳಿಯ ದಾಸರಹಳ್ಳಿಯಲ್ಲಿನ ನಾರ್ಥ್‍ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಎಂಡಿಎಂಎ ಕ್ರಿಸ್ಟಲ್‍ಗಳನ್ನು ಯವಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನು.
ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನಿಂದ 3ಕೋಟಿ ಮೌಲ್ಯದ 3 ಕೆಜಿ ಎಂಡಿಎಂಎ ಕ್ರಿಸ್ಟಲ್‍ನ್ನು ವಶಪಡಿಸಿಕೊಳ್ಳಲಾಗಿದೆ ವಿಚಾರಣೆಯಲ್ಲಿ ಆರೋಪಿಯು 2023ನೇ ಸಾಲಿನಲ್ಲಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಎಂಡಿಎಂಎ ಕ್ರಿಸ್ಟಲ್‍ನ್ನು ಕಮ್ಮನಹಳ್ಳಿಯ ಮತ್ತೋರ್ವ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಖರೀದಿಸಿ,ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.
Previous Articleಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಡಿ.
Next Article ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರಾ..?

1 Comment
?Celebremos a cada creador del destino!
La experiencia digital se vuelve mГЎs intuitiva. casas de apuestas sin registro Esto optimiza la participaciГіn. La satisfacciГіn aumenta.
analiza plataformas que ofrecen giros gratis y programas de fidelidad. Puedes acceder a promociones personalizadas segГєn tu actividad de juego. TambiГ©n permite jugar en torneos con premios en criptomonedas.
casas de apuestas sin licencia: opiniones reales y consejos Гєt casas de – bikesworldrevista.es
?Que la suerte te beneficie con aguardandote magnificos turnos apasionantes !