ರಾಯಚೂರು: ಬಹುಭಾಷಾ ಸಿನಿಮಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (67) ಬುಧವಾರ ತಡರಾತ್ರಿ ಕೊನೆಯುಸಿರೆಳೆದರು.
ರಾಯಚೂರಿನ ಕೆ.ಎಂ.ಕಾಲನಿಯಲ್ಲಿ ವಾಸವಿದ್ದ ಚಲಪತಿ ಚೌದ್ರಿ ಅವರನ್ನು ಅನಾರೋಗ್ಯ ಹಿನ್ನೆಲೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಂಧ್ರದ ವಿಜಯವಾಡ ಮೂಲದ ಚೌದ್ರಿ ಅವರು ರಾಯಚೂರಿನಲ್ಲಿ ಮೊದಲ ಬಾರಿ ಕೇಬಲ್ ಆರಂಭಿಸಿದ್ದರು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಚಲಪತಿ ಬಣ್ಣ ಹಚ್ಚಿದ್ದರು. ಶಿವರಾಜ್ ಕುಮಾರ್, ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರು.