ಅಂಬಾಲಾ(ಪಂಜಾಬ್): ಕೂಲ್ಡ್ರಿಂಕ್ಸ್ ಬಾಟಲ್‌ನ ಮುಚ್ಚಳ ಗಂಟಲಲ್ಲಿ ಸಿಲುಕಿ ಬಾಲಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಪಂಜಾಬ್‌ನ ಅಂಬಾಲಾದಲ್ಲಿ ಶುಕ್ರವಾರ ನಡೆದಿದೆ.
ಬಾಟಲ್‌ನ ಮುಚ್ಚಳವನ್ನು ಹಲ್ಲಿನಿಂದ ಕಚ್ಚಿ ತೆಗೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಾಟಲ್ ಮುಚ್ಚಳ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿ ಉಸಿರಾಡಲಾರದೆ ಬಾಲಕ ಅಸುನೀಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಬಾಲಾ ನಿವಾಸಿ ಯಶ್ ಮೃತಪಟ್ಟ ಬಾಲಕ. ಉಸಿರಾಡಲಾಗದೇ ಒದ್ದಾಡುತ್ತಿದ್ದ ಯಶ್ನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.