ನಿನ್ನೆ ತಾನೆ ಕಾಸರಗೋಡು ಮೂಲದ ನಟಿ ಮತ್ತು ರೂಪದರ್ಶಿ ಶಹಾನಾ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮ ನಿವಾಸದ ಕಿಟಕಿ ಗ್ರಿಲ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಂದು ಟಾಲಿವುಡ್ ಕೊರಿಯೋಗ್ರಾಫರ್ ಮತ್ತು ರಿಯಾಲಿಟಿ ಶೋ ವಿಜೇತೆ ಟೀನಾ ಸಿಧು ಅವರ ಮೃತದೇಹ ಗೋವಾದಲ್ಲಿ ಪತ್ತೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಆಪ್ತವರ್ಗ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಇನ್ನೂ ಟೀನಾ ಸಾವಿಗೆ ನಿಜವಾದ ಕಾರಣವೇನು ಎಂದು ಯಾರಿಗೂ ತಿಳಿದುಬಂದಿಲ್ಲ. ಟೀನಾ ಸಾವಿನ ವಿಷಯವನ್ನು ಕೊರಿಯೋಗ್ರಾಫರ್ ಆಟ ಸಂದೀಪ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ನಲ್ಲಿ ಅವರು, ಟೀನಾ ಅವರ ನಿಧನ ಸುದ್ದಿ ತಿಳಿದು ಆಘಾತ ಮತ್ತು ತೀವ್ರ ದುಃಖವಾಗುತ್ತಿದೆ. ಡಾನ್ಸ್ ರಿಯಾಲಿಟಿ ಶೋನಲ್ಲಿ ಟೀನಾ ನನ್ನ ಜೋಡಿಯಾಗಿದ್ದರು. ಅವರು ತುಂಬಾ ವಿನಮ್ರ ವ್ಯಕ್ತಿಯಾಗಿದ್ದರು. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಟೀನಾಗೆ ಶಾಂತಿ ಸಿಗಲಿ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.
ರಿಯಾಲಿಟಿ ಶೋ ಅಭಿಮಾನಿಗಳು ಟೀನಾ ಸಾವಿನ ಸುದ್ದಿ ತಿಳಿದು ಶಾಕ್ ಆಗಿದ್ದಾರೆ. ಅಲ್ಲದೇ ಟೀನಾ ತನ್ನ ಸಹ ಸ್ಪರ್ಧಿಗಳೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಆದರೆ ಈಗ ಟೀನಾ ಅಕಾಲಿಕ ನಿಧನ ಎಲ್ಲರ ದುಃಖಕ್ಕೆ ಕಾರಣವಾಗಿದೆ.ಟೀನಾ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಪಾಪ್ ಗಾಯಕಿಯಾಗಿದ್ದರು. ಆಟಾ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿದ್ದಾರೆ.