ನವದೆಹಲಿ.
ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೋತ್ ಇದೀಗ ಕಾಸ್ಟಿಂಗ್ ಬಗ್ಗೆ ಮಾತನಾಡಿದ್ದಾರೆ. ಸಮಾಜದ ಹಲವು ರಂಗಗಳಲ್ಲಿ ಮಹಿಳಾ ಸಮುದಾಯ ಕಿರುಕುಳ ಎದುರಿಸುತ್ತಿದೆ ಅದರಲ್ಲೂ ಲೈಂಗಿಕ ಕಿರುಕುಳ ಎನ್ನುವುದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿರುವ ಅವರು ಹಿಂದಿ ಸಿನಿಮಾ ರಂಗದಲ್ಲಿ ಮಹಿಳೆಯರ ಶೋಷಣೆ ಮತ್ತು ಲೈಂಗಿಕ ಕಿರುಕುಳ ಸಾಮಾನ್ಯವಾಗಿದೆ ಎಂದು ಆಪಾದಿಸಿದ್ದಾರೆ.
ಬಾಲಿವುಡ್ ನಟರು, ಮಹಿಳಾ ಕಲಾವಿದರನ್ನು ಊಟಕ್ಕೆ ಕರೆಯುತ್ತಾರೆ.. ಪದೇ ಪದೇ ಮೆಸೇಜ್‌ಗಳನ್ನು ಮಾಡುತ್ತಾರೆ.. ಮನೆಗೆ ಬರುವಂತೆ ದುಂಬಾಲು ಬೀಳುತ್ತಾರೆ ಎಂದು ಕಂಗನಾ ಆರೋಪ ಮಾಡಿದ್ದಾರೆ..