ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಸಂಬಂಧ ಬಂಧಿತ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳ ಮುಂದೆ ಪರೀಕ್ಷಾ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ನಡೆದಿರುವ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಗಿರುವ ಆರೋಪಿ ದಿವ್ಯಾ ಹಾಗರಗಿಯು ಇದೇ ಶಾಲೆಯಲ್ಲಿ ನಡೆದಿರುವ ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಕ್ರಮ ನಡೆಸಿದ ಎರಡು ತಂಡಗಳಿಂದಲೂ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆ ಅದರಲ್ಲಿ ಆರ್.ಡಿ. ಪಾಟೀಲ್ ಆಂಡ್ ಮಂಜುನಾಥ್ ಗ್ಯಾಂಗ್. ಈ ಎರಡು ಗ್ಯಾಂಗ್ನಿಂದಲೂ ದಿವ್ಯಾ ಅವರಿಗೆ ದೊಡ್ಡ ಮಟ್ಟದ ಹಣ ಸಂದಾಯವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರ್ ಡಿ ಪಾಟೀಲ್ ಹಾಗೂ ಮಂಜುನಾಥ್ ಬಳಿಯಿಂದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಹಣ ಕೊಡಿಸಿದ್ದ. ದಿವ್ಯಾ ಹಾಗರಗಿ , ಆರ್.ಡಿ.ಪಾಟೀಲ್ ಹಾಗೂ ಮಂಜುನಾಥ್ ಮಧ್ಯೆ ಕಾಶೀನಾಥ್ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಈ ಕಾಶಿನಾಥ್ ಕೂಡ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಬಯಲಾಗುತ್ತಿದ್ದಂತೆ ಕಾಶೀನಾಥ್ ತೆಲೆಮರೆಸಿಕೊಂಡಡಿದ್ದಾನೆ. ಈ ಪ್ರಕರಣದ ಬಗ್ಗೆ ದಿವ್ಯಾ ಹಾಗರಗಿಯಿಂದ ಸಿಐಡಿ ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ದಿವ್ಯಾ, ಒಂದೊಂದಾಗಿ ಮಾಹಿತಿ ನೀಡುತ್ತಿದ್ದಾರೆ. ಕಾಶೀನಾಥ್ ಮಾತು ಕೇಳಿ ಅಕ್ರಮ ಎಸಗಿರುವುದಾಗಿ ದಿವ್ಯಾ ಬಾಯ್ಬಿಟ್ಟಿದ್ದಾರೆ.
Previous Article“1975’ರ ಪಬ್ ಹಾಡಿಗೆ ಸಿಂಧೂ ಲೋಕನಾಥ್ ಹೆಜ್ಜೆ”
Next Article ಸಿಎಮ್ ಬದಲಾಗ್ತಿದಾರೆ