ANC: ಬಿಜೆಪಿಯಲ್ಲಿ ಲಂಚ- ಮಂಚಕ್ಕೆ ಈಗಾಗಲೇ 2ವಿಕೆಟ್ ಬಿದ್ದಿದೆ. ಇನ್ನು 5 ವಿಕೆಟ್ ಗಳು ಲಂಚಕ್ಕಾಗಿ ಬೀಳಲಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಭವಿಷ್ಯ ನುಡಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಈಶ್ವರಪ್ಪ ಪುತ್ರ ಕಾಂತರಾಜು ನಾಲ್ಕೈದು ವರ್ಷಗಳಲ್ಲಿ 29 ಸೈಟುಗಳನ್ನ ಖರೀದಿಸಿದ್ದಾರೆ. ಇಂಡಸ್ಟ್ರಿಯಲ್ಲಿ 9 ಸೈಟ್ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಈಶ್ವರಪ್ಪ ಎ1 ಆರೋಪಿ. ಆದರೆ ಸಿಎಂ ತಮ್ಮ ಪ್ರೆಸ್ ಮೀಟ್ ನಲ್ಲಿ ಆರೋಪಿಯನ್ನಿಟ್ಟುಕೊಂಡಿದ್ದರು. ಪ್ರೆಸ್ ಮೀಟ್ ನಲ್ಲಿ ರಾಜೀನಾಮೆ ಪತ್ರವನ್ನ ಸಿಎಂ ತೋರ್ಪಡಿಸಿದ್ದರು. ಆರೋಪಿಯನ್ನ ಪಕ್ಕದಲ್ಲೇ ಇಟ್ಟುಕೊಂಡು ಸಾಮಾನ್ಯ ಜನರಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ.? ಎಂದು ಪ್ರಶ್ನಿಸಿದರು.
ಈಶ್ವರಪ್ಪ ದಾರಿಯುದ್ದಕ್ಕೂ ಮೆರವಣಿಗೆ ಮಾಡುತ್ತಾ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುತ್ತಾರೆ. ಇತ್ತ ಆರೋಪಿ ಪರ ಸಿಎಂ ಹಾಗು ಮಾಜಿ ಸಿಎಂ ಯಡಿಯೂರಪ್ಪ ಸಹ ಆರೋಪ ಮುಕ್ತರಾಗಿ ಸಂಪುಟ ಸೇರುತ್ತಾರೆ ಎನ್ನುತ್ತಾರೆ. ಒತ್ತಡವನ್ನ ಕಡಿಮೆಗೊಳಿಸಲು ರಾಜೀನಾಮೆ ಕೊಡಿಸಿದ್ದಾರೆ ಅಷ್ಟೇ. ಈಶ್ವರಪ್ಪರನ್ನ ಬಂಧಿಸದಿದ್ದರೆ ಸಾಕ್ಷ್ಯ ನಾಶ ಮಾಡುತ್ತಾರೆ. ರಾಜೀನಾಮೆ ನೀಡುವ ಮುನ್ನವು 159 ಮಂದಿಯನ್ನ ದಿಡೀರ್ ವರ್ಗಾವಣೆ ಮಾಡುತ್ತಾರೆ. ಈ ಪೈಕಿ 29 ಮಂದಿ ಮೈಸೂರಿನವರನ್ನ ವರ್ಗಾವಣೆ ಮಾಡಿದ್ದಾರೆ. ಈ ವಿಚಾರಗಳೇ ಭ್ರಷ್ಟರು ಎಂದು ತೋರಿಸುತ್ತಿದೆ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
40% ಕಮಿಷನ್: ಇದು ಶುರುವಾಗಿದ್ದು ಸಚಿವ ಕೆ ಸುಧಾಕರ್ ಇಲಾಖೆಯಿಂದ.
ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಇದು ಶುರುವಾಗಿದ್ದು ಸಚಿವ ಕೆ ಸುಧಾಕರ್ ಇಲಾಖೆಯಿಂದ. ಆರೋಗ್ಯ ಇಲಾಖೆಯಲ್ಲಿ ಇದು ಆರಂಭವಾಯಿತು. ಕೆಲಸಕ್ಕೆ ಮುಂಚೆ 40% ಕಮಿಷನ್ ನೀಡಿದರೆ ಗುತ್ತಿಗೆ ಕೆಲಸ ಸಿಗುತ್ತದೆ. ಕಾಂಗ್ರೆಸ್ ಇದರ ಬಗ್ಗೆ ಹೋರಾಟ ಮಾಡುತ್ತದೆ. ಬಿಜೆಪಿ ರಾಜ್ಯವನ್ನು ಲೂಟಿ ಮಾಡಿದೆ ಇದನ್ನು ನಾವು ಜನರಿಗೆ ತಿಳಿಸುತ್ತೇವೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಂ. ಲಕ್ಷ್ಮಣ್ ತಿಳಿಸಿದರು.
ಕಾಂಗ್ರೆಸ್ ಬಗ್ಗೆ ಮಾತನಾಡುವ ಸಿಟಿ ರವಿ ಲೂಟಿ ರವಿ ಆಗಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್, ಬಿಜೆಪಿಯಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆ ನಡೆಯುತ್ತಿದೆ. ಮೈಸೂರಿನಲ್ಲಿಯು ಸಂಸದ-ಶಾಸಕರ ನಡುವೆ ಈ ವಿಷಯಕ್ಕೆ ಭಿನ್ನಾಭಿಪ್ರಾಯ ಬಂದಿತ್ತು. ಕಾಂಗ್ರೆಸ್ ಬಗ್ಗೆ ಮಾತನಾಡುವ ಸಿಟಿ ರವಿ ಲೂಟಿ ರವಿ ಆಗಿದ್ದಾರೆ. 10 ವರ್ಷದ ಹಿಂದೆ ಸಿಟಿ ರವಿ ಬಳಿ 19 ಎಕರೆ 3ಗುಂಟೆ ಜಮೀನು ಇತ್ತು. ಇಂದು ಬೆಂಗಳೂರು. ಹಾಸನ ಚಿಕ್ಕಮಗಳೂರು, ಮೈಸೂರು ಡೆಲ್ಲಿಯಲ್ಲಿ ಆಸ್ತಿ ಮಾಡಿದ್ದಾರೆ. 400 ರಿಂದ 500 ಎಕರೆ ಜಮೀನು ರವಿ ಭಾವ ಸುಧರ್ಶನ್ ಹೆಸರಿನಲ್ಲಿದೆ. ಎಲ್ಲಾ ಕಂಟ್ರಾಕ್ಟ್ ನ್ನು ತಮ್ಮ ಭಾವ ಸುದರ್ಶನ್ ಗೆ ನೀಡುತ್ತಿದ್ದಾರೆ. ಜೈಲಿಗೆ ಹೋಗಿರುವ ಅಮಿತ್ ಶಾ, ಯಡಿಯೂರಪ್ಪ ಅಂತವರನ್ನಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಬಾಂಬೆ ಬಾಯ್ಸ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಬೇನಾಮಿ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮರೆಮಾಚಿ ಕೋಮು ವಿಚಾರಗಳನ್ನ ಮುನ್ನೆಲೆಗೆ ತರುತ್ತಿದ್ದಾರೆ ಎಂದು ಗುಡುಗಿದರು.