ಬೆಂಗಳೂರು,ಜ.29:
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ ಖರ್ಗೆ ಪ್ರಶ್ನೆಗಳನ್ನು ಎತ್ತಿದರೆ, ಬಿಜೆಪಿ ನಾಯಕರು ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು,ಪ್ರಶ್ನೆಗಳನ್ನು ಎತ್ತಿದರೆ, ವಸ್ತು ಸ್ಥಿತಿಯನ್ನು ಹೇಳಿದರೆ ಹಿಂದೂ ವಿರೋಧಿ ಎಂದು ಹೇಳಿ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಬಿಜೆಪಿಯ ಹಳೆ ಚಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ ಬಿಜೆಪಿ ಏನಾದರೂ 12ನೇ ಶತಮಾನದಲ್ಲಿ ಇದ್ದಿದ್ದರೆ ಮೌಢ್ಯದ ವಿರುದ್ಧ ವಚನ ಚಳವಳಿ ಕಟ್ಟಿದ್ದ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೋ ಏನೋ! ಆದರೆ ಆಗಿನ ಮನುವಾದಿಗಳು ಶರಣರಿಗೆ ಪೀಡಿಸಿದ್ದರು ಎನ್ನುವುದು ಇತಿಹಾಸ’ ಎಂದು ಹೇಳಿದ್ದಾರೆ. ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು ದಕ್ಷಿಣದ ದೇಶಕದು ಕುದುರೆಯಹುದೆ?’ ಎಂದು ಹೇಳಿದ ಕುವೆಂಪುರನ್ನು ಹಿಂದೂ ವಿರೋಧಿ ಎನ್ನುವ ದಮ್ಮು ತಾಕತ್ತು ಇದೆಯೇ? ಎಂದು ಪ್ರಶ್ನಿಸಿರುವ ಅವರು
ನೀರ ಕಂಡಲ್ಲಿ ಮುಳುಗುವರಯ್ಯ / ಮರ ಕಂಡಲ್ಲಿ ಸುತ್ತುವರಯ್ಯ / ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು / ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ.-ವೇದಕ್ಕೆ ಬರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ ಎಂದ ಬಸವಣ್ಣರನ್ನು ಹಿಂದೂ ವಿರೋಧಿ ಎನ್ನುವಿರಾ? ಎಂದು ಕೇಳಿದ್ದಾರೆ
-ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ ಎಂದ ಅಕ್ಕಮಹಾದೇವಿಯನ್ನು ಹಿಂದೂ ವಿರೋಧಿ ಎನ್ನುವಿರಾ?-ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ’ ಎಂದ ಅಂಬಿಗರ ಚೌಡಯ್ಯರನ್ನು ಹಿಂದೂ ವಿರೋಧಿ ಎನ್ನುವಿರಾ?-ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಎಂದಿದ್ದ ಅಲ್ಲಮರನ್ನು ಹಿಂದೂ ವಿರೋಧಿ ಎನ್ನುವಿರಾ?’ಸೌ ಚುಹೇ ಖಾಕೆ ಬಿಲ್ಲಿ ಹಜ್ ಕೊ ಚಲೀ’ ಎಂಬ ನುಡಿಗಟ್ಟು ಉರ್ದುವಿನಲ್ಲೂ ಇದೆ, ಯಾವ ಧರ್ಮವೂ ಕೂಡ ಕೆಟ್ಟ ಕೆಲಸ ಮಾಡಿ ಪುಣ್ಯ ಕ್ಷೇತ್ರಕ್ಕೆ ಬಂದರೆ ಪಾಪ ಪರಿಹಾರವಾಗುತ್ತದೆ ಎಂದಿಲ್ಲ, ನಿಮ್ಮ ಒಳ್ಳೆಯ ಕೆಲಸಗಳೇ ನಿಮ್ಮ ಪುಣ್ಯಕ್ಕೆ ದಾರಿ ಎನ್ನುತ್ತವೆ.ಬಿಜೆಪಿಯವರು ಮೊದಲು ಹಿಂದೂ ಧರ್ಮದ ಅಧ್ಯಯನ ಮಾಡಲಿ, ಪಾಪ, ಪುಣ್ಯಗಳು ನದಿಗಳಲ್ಲಿ ಮುಳುಗೇಳುವುದರಿಂದ ನಿರ್ಧಾರವಾಗುವುದಿಲ್ಲ, ನಾವು ಮಾಡಿದ ಕೆಟ್ಟ ಕೆಲಸಗಳಿಗೆ ಕುಂಭ ಸ್ನಾನದಿಂದ ಮಾಫಿಯೂ ದೊರಕುವುದಿಲ್ಲ. ಗಂಗಾ ಸ್ನಾನ ಮಾಡಿದರೆ ಕೆಟ್ಟವನು ಒಳ್ಳೆಯವನಾಗುವುದಿಲ್ಲ, ಕರ್ಮ, ಕಾಯಕಗಳು ಮಾತ್ರ ನಮ್ಮನ್ನು ಉದ್ದರಿಸಬಲ್ಲವು ಎನ್ನುವುದನ್ನು ಹಲವು ಮಹನೀಯರು ಹೇಳಿದ್ದಾರೆ. ಬಿಜೆಪಿಯವರು ಧರ್ಮದ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು, ಸಾಧನೆ ಹೇಳಿಕೊಂಡು ರಾಜಕಾರಣ ಮಾಡಿ ತೋರಿಸಲಿ ಎಂದು ಹೇಳಿದ್ದಾರೆ.
Previous Articleವಿಜಯೇಂದ್ರ ವಿರುದ್ಧ ಸಮರ ಘೋಷಣೆ
Next Article ಊಟ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಡಿ
22 Comments
how to get clomiphene without dr prescription buying cheap clomiphene pill cost cheap clomiphene pills can you buy clomiphene without rx where can i get clomid tablets clomiphene medication uk how can i get clomid
I am actually delighted to glance at this blog posts which consists of tons of worthwhile facts, thanks representing providing such data.
This website absolutely has all of the information and facts I needed about this thesis and didn’t positive who to ask.
buy propranolol for sale – methotrexate us methotrexate 10mg cost
azithromycin 500mg over the counter – azithromycin 250mg over the counter bystolic order online
buy augmentin generic – https://atbioinfo.com/ buy generic acillin
nexium online order – https://anexamate.com/ buy esomeprazole 40mg pill
buy warfarin generic – anticoagulant cozaar 25mg for sale
purchase mobic without prescription – mobo sin mobic 7.5mg without prescription
buy prednisone 20mg generic – corticosteroid deltasone 40mg uk
pills for erection – site buy ed pills cheap
buy diflucan 200mg pills – on this site purchase diflucan without prescription
lexapro 10mg sale – https://escitapro.com/ escitalopram 10mg price
generic cenforce – cenforce 100mg oral order cenforce
buy cialis online no prescription – this cialis definition
buy cialis 20 mg online – does cialis raise blood pressure cialis prices at walmart
ranitidine where to buy – buy ranitidine 150mg pill buy ranitidine 150mg without prescription
This website absolutely has all of the low-down and facts I needed there this case and didn’t identify who to ask. gnolvade.com
More posts like this would add up to the online play more useful. https://buyfastonl.com/amoxicillin.html
Thanks on putting this up. It’s understandably done. https://ursxdol.com/cenforce-100-200-mg-ed/
More content pieces like this would make the web better. https://prohnrg.com/product/cytotec-online/
Thanks an eye to sharing. It’s outstrip quality. vente viagra en ligne