ಶ್ರೀರಂಗಪಟ್ಟಣ : ತಾಲೂಕಿನಲ್ಲಿ ನೆನ್ನೆ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಪಂಪ್ ಹೌಸ್ ಬಳಿ ಕೆ.ಆರ್.ಎಸ್ ಮೈಸೂರು ರಸ್ತೆಯಲ್ಲಿ 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ರಸ್ತೆ ಮಧ್ಯೆ ಮುರಿದು ಬಿದ್ದಿದ್ದು ಹಲವು ಮರಗಳು ಕೂಡ ರಸ್ತೆ ಧರೆಗುರುಳಿವೆ. ರಾತ್ರಿ ಮಳೆ ಸುರಿಯುವ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.ವಿದ್ಯುತ್ ಕಂಬಗಳು ಮತ್ತು ಮರಗಳು ರಸ್ತೆ ಮಧ್ಯೆ ಉರುಳಿ ಬಿದ್ದಿರೋ ಕಾರಣದಿಂದ ಪಂಪ್ ಹೌಸ್ ನಿಂದ ಕೆ.ಆರ್.ಎಸ್- ಮೈಸೂರು ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.ಅಲ್ದೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರೋದ್ರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಜನರು ಪರದಾಡುವಂತಾಗಿದೆ.ಇತ್ತ ಮುರಿದು ಬಿದ್ದ ವಿದ್ಯುತ್ ಕಂಬಳನ್ನು ದುರಸ್ತಿ ಮಾಡಲು ಸೆಸ್ಕ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಿರುಗಾಳಿ ಮಳೆ: ಮರಗಳು, ರಸ್ತೆ ಮಧ್ಯೆ ಮುರಿದು ಬಿದ್ದ ವಿದ್ಯುತ್ ಕಂಬಗಳು
Previous Articleನಾನು ಸೋತಾಗಲು ಗೆದ್ದಾಗಲು ಒಂದೇ ತರ ಇದ್ದೇನೆ
Next Article ಎಸ್.ಎಫ್.ಸಿ ಸೊಸೈಟಿಯಲ್ಲಿ ಮಹತ್ವದ ದಾಖಲೆಗಳ ಕಳುವು