01 MAY 2024
ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹ (ಪಿವಿಟಿಜಿ) ಸಮುದಾಯಗಳು ಮತ್ತು ಇತರ ಬುಡಕಟ್ಟು ಸಮೂಹದ ಜನರು ಚುನಾವಣಾ ಪ್ರಕ್ರಿಯೆ ಅರಿತು ಮತ ಚಲಾಯಿಸುವಂತೆ ಮಾಡಲು ಕಳೆದ ಎರಡು ವರ್ಷಗಳಿಂದ ಭಾರತೀಯ ಚುನಾವಣಾ ಆಯೋಗ ಮಾಡಿದ ಪ್ರಯತ್ನಗಳು ಈಗ ಫಲ ಕೊಟ್ಟಿವೆ. ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಸಾರ್ವತ್ರಿಕ Election 2024 ರ ವಿವಿಧ ಮತಗಟ್ಟೆಗಳಲ್ಲಿ ಬುಡಕಟ್ಟು ಸಮೂಹಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿದೆ. ಗ್ರೇಟರ್ ನಿಕೋಬಾರ್ ನ ಶೋಂಪೇನ್ ಬುಡಕಟ್ಟು ಜನರು ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿರುವುದು, ಐತಿಹಾಸಿಕ ನಡೆಯಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಿವಿಟಿಜಿಗಳ ಒಳಗೊಳ್ಳುವಿಕೆ ಬಗ್ಗೆ ಅರಿತ ಚುನಾವಣಾ ಆಯೋಗ, ಈ ಸಮೂಹದ ಜನರು ಮತದಾರರಾಗಿ ಸೇರ್ಪಡೆಯಾಗಲು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಲು, ಕಳೆದ ಎರಡು ವರ್ಷಗಳಿಂದ ವಿಶೇಷ ಪ್ರಯತ್ನಗಳನ್ನು ಮಾಡಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ವಿಶೇಷ ಪ್ರಕ್ರಿಯೆಯಲ್ಲಿ, ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹಗಳು ವಾಸಿಸುವ ರಾಜ್ಯಗಳಲ್ಲಿ ವಿಶೇಷ ಔಟ್ ರೀಚ್ ಶಿಬಿರಗಳನ್ನು ನಡೆಸುವ ಮೂಲಕ ಅಲ್ಲಿನ ಬುಡಕಟ್ಟು ವಾಸಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲಾಯಿತು. ವಿಶೇಷ ಸರಾಂಶ ಪರಿಷ್ಕರಣೆ 2023ರ ಮತದಾರರ ಪಟ್ಟಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ, ನವೆಂಬರ್ 2022 ರಲ್ಲಿ ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಶ್ರೀರಾಜೀವ್ ಕುಮಾರ್ ಅವರು, ಪಿವಿಟಿಜಿ ಸಮುದಾಯದರವನ್ನು ದೇಶದ ಹೆಮ್ಮೆಯ ಮತದಾರರನ್ನಾಗಿ ಸಬಲೀಕರಣಗೊಳಿಸಲು ಆಯೋಗದ ಔಟ್ ರೀಚ್ (ದೂರದೂರುಗಳಲ್ಲಿ ಬಾಹ್ಯ ಕಾರ್ಯಕ್ರಮ) ಮತ್ತು ಮಧ್ಯಸ್ಥಿಕೆ ಆದ್ಯತೆ ಬಗ್ಗೆ ಒತ್ತಿ ಹೇಳಿದ್ದರು.
ಮತದಾನದ ದಿನ ಮತದಾರರನ್ನು ಸೆಳೆಯುವ ಪ್ರಯತ್ನವಾಗಿ ವಿಶಿಷ್ಟ ಬುಡಕಟ್ಟು ಮಾದರಿಯಲ್ಲಿ ಅಲಂಕೃತಗೊಂಡ 40 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.