ಬೆಂಗಳೂರು,ಏ.15:
ರಾಜಧಾನಿ ಮಹಾನಗರ ಬೆಂಗಳೂರಿನ ಮಸೀದಿಯೊಂದರಲ್ಲಿ ತಾಲಿಬಾನ್ ಮಾದರಿಯ ಆಡಳಿತ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಪತಿ ನೀಡಿದ ದೂರು ಆಧರಿಸಿ ಮಸೀದಿಯೊಂದರ ಆಡಳಿತ ಮಂಡಳಿ ಮಹಿಳೆಯನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ವೈಪುಗಳಿಂದ ಮನಬಂದಂತೆ ಥಳಿಸಿದೆ.
ಬುರ್ಖಾ ಹಾಕಿದ ಮಹಿಳೆಯನ್ನು ಮಸೀದಿ ಮುಂದೆ ಥಳಿಸುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿದ ಕೆಲವರು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಇವುಗಳನ್ನು ನೋಡಿದ ನೆಟ್ಟಿಗರು ಇದೇನು ತಾಲಿಬಾನ್ ಸಂಸ್ಕೃತಿ ಎಂದು ಕಮೆಂಟ್ ಹಾಕಿದ್ದಾರೆ.
ಇದಾದ ಕೂಡಲೇ ಎಚ್ಚೆತ್ತುಕೊಂಡ ತಾವರೆಕೆರೆ ಪೊಲೀಸರು ಮೊಹಮ್ಮದ್ ನಿಯಾಜ್ (32), ಮೊಹಮ್ಮದ್ ಗೌಸ್ಪೀರ್ (45), ಚಾಂದ್ ಬಾಷಾ (35), ದಸ್ತಗೀರ್ (24), ರಸೂಲ್ ಟಿ.ಆರ್ (42) ಮತ್ತು ಇನಾಯತ್ ಉಲ್ಲಾ (51) ಎಂಬುವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ತಾವರೆಕೆರೆಯ ನಿವಾಸಿ ಅಹ್ಮದ್ ದಾವಣಗೆರೆಯ ಶಬೀನಾ ಬಾನು ಎಂಬುವರನ್ನು ಮದುವೆಯಾಗಿದ್ದಾನೆ. ಇತ್ತೀಚೆಗೆ ಶಬೀನಾ ಬಾನು ತನ್ನ ತಾಯಿಯ ಮನೆಗೆ ತೆರಳಿದ್ದರು.
ಸಂತ್ರಸ್ತೆ ಶಬೀನಾ ಬಾನು ಏಪ್ರಿಲ್ 7 ರಂದು ದಾವಣಗೆರೆಯ ತನ್ನ ಮನೆಯಲ್ಲಿದ್ದಾಗ ಆಕೆಯ ಸಂಬಂಧಿ ನಸ್ರೀನ್ ಮತ್ತು ಆಕೆಯ ಪತಿ ಫಯಾಜ್ ಅವಳನ್ನು ಭೇಟಿಯಾದರು. ನಂತರ ಮೂವರು ಸಮೀಪದ ಬುಕ್ಕಾಂಬುದಿಯ ಬೆಟ್ಟಕ್ಕೆ ಸಣ್ಣ ವಿಹಾರಕ್ಕೆ ಹೋಗಿ ನಂತರ ಸಂಜೆ ಮೂವರು ಶಬೀನಾ ಅವರ ಮನೆಗೆ ಬಂದಿದ್ದರು.
ಈ ವೇಳೆ ಶಬೀನಾ ಅವರ ಪತಿ ಜಮೀಲ್ ಅಹ್ಮದ್ ಕೂಡಾ ಮನೆಗೆ ಬಂದಿದ್ದಾರೆ ಅಲ್ಲಿ ಶಬೀನಾ ಅವರ ಸಂಬಂಧಿಕರನ್ನು ಮನೆಯಲ್ಲಿ ನೋಡಿ ಕೋಪಗೊಂಡು ಬೆಂಗಳೂರಿಗೆ ಬಂದು ತಾವರೆಕೆರೆಯ ಜಾಮಾ ಮಸೀದಿಗೆ ತೆರಳಿ ಪತ್ನಿ ಮತ್ತು ಆಕೆಯ ಇಬ್ಬರು ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದಾರೆ
ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.ಇದಾದ ನಂತರ ಮಸೀದಿಯ ಮೌಲ್ವಿಗಳು ಶಬೀನಾಳನ್ನು ಮಸೀದಿ ಬಳಿ ಕರೆಸಿ ಅಲ್ಲಿನ ಮರವೊಂದಕ್ಕೆ ಕಟ್ಟಿ ಹಾಕಿ ಪೈಪ್ , ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.