ಬೆಂಗಳೂರು.
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವಹಿವಾಟು ರಾಕೆಟ್ ವೇಗದಲ್ಲಿ ಬೆಳೆಯುತ್ತಾ ಸಾಗುತ್ತಿದೆ ಅದರಲ್ಲೂ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಬಾಗಲೂರು ಪ್ರದೇಶದಲ್ಲಿ ಮನೆಗಳನ್ನು ಹೊಂದುವುದು ಅತ್ಯಂತ ದುಬಾರಿಯಾಗಿದೆ.
ಈ ಪ್ರದೇಶದಲ್ಲಿ ನಿವೇಶನಗಳ ದರ ಶೇಕಡ 90ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ
ಅನರಾಕ್ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳನ್ನು ರಿಯಲ್ ಎಸ್ಟೇಟ್ ವಾಹಿವಾಟಿನ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿತ್ತು.
ಇದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅದರಲ್ಲೂ ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ಮನೆಗಳ ಬೆಲೆಯಲ್ಲಿ ಗಣನೀಯ ಏರಿಕೆಗೆ ಈ ಭಾಗಗಳಲ್ಲಿ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯೇ ಕಾರಣ’ ಎಂದಿದೆ
ಬಾಗಲೂರಲ್ಲಿ 2019ರ ಕೊನೆಯಲ್ಲಿ ಮನೆಗಳ ಸರಾಸರಿ ಬೆಲೆ ಚದರ ಅಡಿಗೆ 4,300 ಇದ್ದದ್ದು ಈ ವರ್ಷದ ಜೂನ್ ಅಂತ್ಯದ ವೇಳೆಗೆ ಪ್ರತಿ ಚದರ ಅಡಿಗೆ ಸರಾಸರಿ ಬೆಲೆ 8,151ಕ್ಕೆ ಏರಿದೆ’ ಎಂದು ವರದಿ ತಿಳಿಸಿದೆ .
ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ಇದೇ ಅವಧಿಯಲ್ಲಿ ಮನೆಗಳ ಸರಾಸರಿ ಬೆಲೆಯಲ್ಲಿ ಕ್ರಮವಾಗಿ ಶೇ 80 ಹಾಗೂ ಶೇ 58ರಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಮನೆಗಳ ಬೆಲೆ ಕಳೆದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 28ರಷ್ಟು ಹೆಚ್ಚಳವಾಗಿದೆ ಎಂದು ಕ್ರೆಡಾಯ್ ಕೊಲಿಯರ್ಸ್ ಮತ್ತು ಲಯಾಸಸ್ ಫೊರಸ್ ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯೊಂದು ಹೇಳಿದೆ.
2023ರ ಜೂನ್ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ನಿವೇಶನ ಪ್ರತಿ ಚದರ ಅಡಿಗೆ 8688 ರೂಪಾಯಿ ಇದ್ದರೆ 2024ರ ಜೂನ್ ತ್ರೈಮಾಸಿಕಕ್ಕೆ 11161 ರೂಪಾಯಿಗೆ ಏರಿಕೆಯಾಗಿದೆ ದೇಶದ ಎಂಟು ನಗರಗಳಲ್ಲಿ ಮನೆಗಳ ಬೆಲೆ ಸರಾಸರಿ ಶೇ 12ರಷ್ಟು ಹೆಚ್ಚಳವಾಗಿದ್ದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಶೇ 30 ರಷ್ಟು ಏರಿಕೆ ಕಂಡುಬಂದಿದೆ. ಇಲ್ಲಿ ಪ್ರತಿ ಚದರ ಅಡಿಗೆ 8652ರಿಂದ 11279ಕ್ಕೆ ಹೆಚ್ಚಳ ಕಂಡಿದೆ.ಬೆಂಗಳೂರಿನಲ್ಲಿ ಸರಾಸರಿ ಶೇ 28ರಷ್ಟು ಏರಿಕೆಯಾಗಿದೆ.
Previous Articleಸುಮ್ಮನಿದ್ದರೆ ಹೀಗೆ ಆಗೋದು.
Next Article ದರ್ಶನ್ ಹಿಂಡಲಗಾ ಜೈಲಿನ ಅಂದೇರಿ ಸೆಲ್ ಗೆ ಶಿಫ್ಟ್.?