Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನಲ್ಲಿ ಹುಡುಗಿಯರೇ ಹೆಚ್ಚು ನಾಪತ್ತೆ.
    Trending

    ಬೆಂಗಳೂರಿನಲ್ಲಿ ಹುಡುಗಿಯರೇ ಹೆಚ್ಚು ನಾಪತ್ತೆ.

    vartha chakraBy vartha chakraAugust 8, 202425 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಆ.8-
    ರಾಜ್ಯದ ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಲ್ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 12 ವರ್ಷಗಳಲ್ಲಿ ನಾಪತ್ತೆಯಾಗಿರುವ
    485 ಮಹಿಳೆಯರು,ಬಾಲಕಿಯರು ಇದುವರೆಗೂ ಪತ್ತೆಯಾಗಿಲ್ಲ.
    ಪ್ರೇಮ ಪ್ರಕರಣಗಳು, ಕೌಟುಂಬಿಕ ಕಲಹ, ಮನಸ್ತಾಪ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಿತರ ಪ್ರಭಾವ, ಅಪಹರಣ, ಕಳ್ಳಸಾಗಣೆ ಮತ್ತಿತರ ಕಾರಣದಿಂದ ಬಾಲಕಿಯರು, ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ
    ವರದಿಯ ಪ್ರಕಾರ 19 ರಿಂದ 21 ವರ್ಷ ವಯಸ್ಸಿನ 173 ಹುಡುಗಿಯರು ಇನ್ನೂ ಪತ್ತೆಯಾಗಿಲ್ಲ. 16 ವರ್ಷದೊಳಗಿನ 162 ಹುಡುಗಿಯರು ಕಾಣೆಯಾಗಿದ್ದಾರೆ. 17 ರಿಂದ 18 ವರ್ಷ ವಯಸ್ಸಿನ 92 ಹುಡುಗಿಯರು ಮತ್ತು 22 ವರ್ಷ ಮೇಲ್ಪಟ್ಟ ವಯಸ್ಸಿನ 58 ಮಹಿಳೆಯರು ಸಹ ಪತ್ತೆಯಾಗಿಲ್ಲ. ಕಾಣೆಯಾದವರಲ್ಲಿ ಶೆ. 70 ರಷ್ಟು ಮಹಿಳೆಯರು ಮತ್ತು ಹುಡುಗಿಯರು ಆರ್ಥಿಕವಾಗಿ ಹಿಂದುಳಿದ ಮತ್ತು ಹಿಂದುಳಿದ ಕುಟುಂಬಗಳಿಗೆ ಸೇರಿದವರು ಎಂದು ಅಂಕಿಅಂಶಗಳ ಮೂಲಕ ತಿಳಿದುಬಂದಿದೆ.
    ಕೆಲ ಪ್ರಕರಣಗಳಲ್ಲಿ ತಮ್ಮ ಮನೆಯವರು ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಅಂಶವನ್ನು ಮರೆಮಾಚುವ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಲು ತಮ್ಮದೆ ಮಾರ್ಗಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಅಂತಿಮವಾಗಿ ನಾಪತ್ತೆಯಾದವರನ್ನು ಪತ್ತೆಹಚ್ಚಿಕೊಳ್ಳುತ್ತಾರೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಈ ಕುಟುಂಬಗಳು ಪೊಲೀಸ್ ತನಿಖೆಗಳನ್ನೂ ಮೀರಿದ ವಿಧಾನಗಳು, ಮಾರ್ಗಗಳನ್ನು ಬಳಸುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.
    ಇನ್ನು ಕೆಲ ಕುಟುಂಬಗಳಲ್ಲಿ ಕಾಣೆಯಾದ ಯುವತಿ ಹಿಂದಿರುಗಿ ಮನೆಗೆ ಬಂದರೆ ನೆರೆಹೊರೆಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವಮಾನ ಮಾಡುತ್ತಾರೆ ಎಂದು ಹೆದರಿ ಕುಟುಂಬಸ್ಥರು ಪ್ರಕರಣದ ತನಿಖೆಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹಾಗೂ ತನಿಖೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಗಳನ್ನೂ ಮಾಡುವುದಿಲ್ಲ. ಅಂತಿಮವಾಗಿ ತನಿಖಾಧಿಕಾರಿಗಳಿಗೆ ಪ್ರತಿಕ್ರಿಯಿಸುವುದನ್ನೂ ನಿಲ್ಲಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಪೊಲೀಸರು ನಿರಂತರವಾಗಿ ದೂರುದಾರರನ್ನು ಸಂಪರ್ಕಿಸುತ್ತಾರೆ, ಆದರೆ ಅವರಿಂದಲೇ ಸ್ಪಂದನೆ ಸಿಗಲ್ಲ. ಆಗ ಪ್ರಕರಣಗಳನ್ನು ಕೈಬಿಡಲಾಗುತ್ತೆ. ಅಪ್ರಾಪ್ತ ಬಾಲಕಿಯು ಓಡಿಹೋಗಿ ಮದುವೆಯಾಗಿ ಹಿಂದಿರುಗಿದಾಗ, ದೂರುದಾರರು ಹುಡುಗನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವುದನ್ನು ತಡೆಯಲು ಪೊಲೀಸರಿಗೆ ಮಾಹಿತಿ ನೀಡುವುದನ್ನೇ ತಪ್ಪಿಸುತ್ತಾರೆ. ಇದರಿಂದಾಗಿ ಅನೇಕ ನಾಪತ್ತೆ ಪ್ರಕರಣ​ಗಳು ಕ್ಲೋಸ್ ಆಗುವುದಿಲ್ಲ ಎಂದು ಅಧಿಕಾರಿಯು ತಿಳಿಸಿದ್ದಾರೆ.

    Verbattle
    Verbattle
    Verbattle
    Bangalore Karnataka News Trending Varthachakra ಅಪರಾಧ ಸುದ್ದಿ ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleಹಣ ಲಪಟಾಯಿಸಲು ನಕಲಿ ವ್ಯಕ್ತಿ ಸೃಷ್ಟಿ
    Next Article ಮತ್ತೊಂದು ಪಾದಯಾತ್ರೆಗೆ ಸಜ್ಜಾಗುತ್ತಿರುವ ಬಿಜೆಪಿ.
    vartha chakra
    • Website

    Related Posts

    ಬೆಂಗಳೂರಿನ ಹಲವೆಡೆ ಫೆಬ್ರವರಿ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

    January 31, 2026

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    January 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    January 31, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನ ಹಲವೆಡೆ ಫೆಬ್ರವರಿ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Marcusreomb on ಧರ್ಮಸ್ಥಳ ಪ್ರಕರಣಕ್ಕೆ ಸ್ಪೋಟಕ ತಿರುವು !
    • pilesos daison kypit_psml on Rohit – Virat ಬಗ್ಗೆ Chetan Sharma ಹೇಳಿದ್ದೇನು?
    • Marcusreomb on ಹಬ್ಬಕ್ಕೆ ಬೋನಸ್ ನೀಡದ ಮಾಲೀಕನ ಕೊಂದ ನೌಕರರು
    Latest Kannada News

    ಬೆಂಗಳೂರಿನ ಹಲವೆಡೆ ಫೆಬ್ರವರಿ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

    January 31, 2026

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    January 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    January 31, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.