ಬೆಂಗಳೂರು,ನ.7-
ಮಹಾನಗರ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ವಾಣಿಜ್ಯ ಪ್ರದೇಶ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಇದೀಗ ಆಟೋ ಮತ್ತು ಸರಕು ಸೇವೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಈ ವಾಹನಗಳಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ ಸರಕು ಸಾಗಣೆ ಹೆಸರಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಾ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಿವಾಜಿನಗರ ಸಂಚಾರ ಪೊಲೀಸರು ಕಮರ್ಷಿಯಲ್ ಸ್ಟ್ರೀಟ್ ಒಳಹೋಗುವ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಆಟೋ ಮತ್ತು ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧದ ಬ್ಯಾನರ್ ಹಾಕಿದ್ದಾರೆ.
ಅದರಲ್ಲಿ ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶ ನಿಷೇಧ ಆಗಿದೆ. ಆಟೋ ಮತ್ತು ಸರಕು ವಾಹನಗಳ ಓಡಾಟದಿಂದ ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿ ಟ್ರಾಫಿಕ್ ಜಾಮ್ ಆಗುತ್ತದೆ ಇದಕ್ಕಾಗಿ ನಿಷೇಧ ಮಾಡಲಾಗಿದೆ ಎಂದು ತಿಳಿಸಿದೆ.
ವಾರಾಂತ್ಯದಲ್ಲಿ ಅಲ್ಲಿ ದೇಶ, ವಿದೇಶಿಗರು ಓಡಾಟ ಮಾಡುತ್ತಾರೆ. ಆದರೆ ಆಟೋ ಮತ್ತು ಸರಕು ವಾಹನಗಳ ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನಿಷೇಧದ ಮಧ್ಯೆ ಕೂಡ ಆಟೋ ಮತ್ತು ಸರಕು ವಾಹನಗಳು ಹೋದರೆ ನೋ ಎಂಟ್ರಿ ಕೇಸ್ ಹಾಕಿ 500 ರೂ. ದಂಡ ಹಾಕಲಿದ್ದಾರೆ.
Previous Articleವಸೂಲಿ ಮಾಡುವ ಮಂತ್ರಿ.
Next Article ಪಾಕಿಸ್ತಾನದಿಂದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ.