ಬೆಂಗಳೂರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ Bengaluru ನಗರದ ಜನರಿಗೆ ಮಾತೊಂದು ದರ ಏರಿಕೆಯ ಹೊರೆಹಾಕಲು ಸದ್ದಿಲ್ಲದೆ ಯೋಜನೆಯೊಂದು ಸಿದ್ಧವಾಗುತ್ತಿದೆ.
ನಿರ್ವಹಣಾ ವೆಚ್ಚ, ವಿದ್ಯುತ್ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ತೀವ್ರ ನಷ್ಟದಲ್ಲಿರುವ ಬೆಂಗಳೂರು ಜಲ ಮಂಡಳಿಯನ್ನು ಸರಿದಾರಿಗೆ ತರುವ ದೃಷ್ಟಿಯಿಂದ ಕುಡಿಯುವ ನೀರು ಮಾರಾಟ ದರ ಹೆಚ್ಚಳ ಮಾಡಲು ಜಲ ಮಂಡಳಿ ಮುಂದಾಗಿದೆ.
ದರ ಹೆಚ್ಚಳಕ್ಕೂ ಮುನ್ನ ಎಲ್ಲರ ವಿಶ್ವಾಸ ಪಡೆಯಲು ಮುಂದಾಗಿರುವ ಜಲ ಮಂಡಳಿ ಆಯುಕ್ತ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ನಗರ ಜಲ ಮಂಡಳಿ ವ್ಯಾಪ್ತಿಯ ಎಲ್ಲಾ 27 ಶಾಸಕರಿಗೆ ವೈಯಕ್ತಿಕ ಪತ್ರ ಬರೆದಿದ್ದು ದರ ಹೆಚ್ಚಳದ ಅನಿವಾರ್ಯತೆಯನ್ನು ವಿವರಿಸಿದ್ದಾರೆ
ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆ, ಸೌಕರ್ಯಗಳಿಗಾಗಿ ಜಲಮಂಡಳಿ ಮಾಡುತ್ತಿರುವ ವೆಚ್ಚದ ಗಮನಾರ್ಹ ಹೆಚ್ಚಳದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವೆಚ್ಚದಲ್ಲಿ ಶೇಕಡಾ 107.3 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ನಿರ್ವಹಣೆ ವೆಚ್ಚ ಶೇ 122.5ರಷ್ಟು ಹೆಚ್ಚಿದ್ದರೆ, ವೇತನ ಮತ್ತು ಪಿಂಚಣಿ ಶೇ 61.3ರಷ್ಟು ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಜಲ ಮಂಡಳಿಯ ಮಾಸಿಕ ವೆಚ್ಚವು 170 ಕೋಟಿ ರೂಪಾಯಿಗಳಾಗಿದ್ದು, ನೀರಿನ ಬಿಲ್‌ಗಳಿಂದ ಬರುವ ಆದಾಯ ಕೇವಲ 129 ಕೋಟಿ ರೂಪಾಯಿ ಆಗಿದೆ. ಇದು ಜಲಮಂಡಳಿಗೆ 41 ಕೋಟಿ ರೂಪಾಯಿಗಳ ಕೊರತೆ ಉಂಟುಮಾಡಿದೆ. ಹೊಸ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು, ಒಳಚರಂಡಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಹೊಸ ನೀರಿನ ಸಂಪರ್ಕಗಳಿಗಾಗಿ ಉದ್ದೇಶಿಸಲಾದ ಹಣವನ್ನು ಬಳಸಿಕೊಂಡು ಈ ಕೊರತೆಯನ್ನು ತಾತ್ಕಾಲಿಕವಾಗಿ ಸರಿದೂಗಿಸಲಾಗುತ್ತದೆ.
2014 ರ ನವೆಂಬರ್ನಲ್ಲಿ ಈ ಹಿಂದೆ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು ಎಂದು ಹೇಳಿರುವ ಅವರು ಇದೀಗ ದರ ಹೆಚ್ಚಳ ಮಾಡದೆ ಹೋದರೆ ಬೆಂಗಳೂರು ಜಲಮಂಡಳಿ ತೀವ್ರ ನಷ್ಟದ ಕೂಪದಲ್ಲಿ ಸಿಲುಕಲಿದೆ ಎಂದು ಎಚ್ಚರಿಸಿದ್ದಾರೆ.
ನೀರು ಮಾರಾಟ ದರವನ್ನು ಯಾವ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತದೆ ಎಂಬ ಬಗ್ಗೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿಲ್ಲ ಈ ಬಗ್ಗೆ ಎಲ್ಲಾ ಶಾಸಕರ ಅಭಿಪ್ರಾಯ ಪಡೆದ ನಂತರ ಜಲ ಮಂಡಳಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವ