ಬೆಂಗಳೂರು, ಮೇ 15-
ಗುರುತು ಮರೆಮಾಚಲು ಖತರ್ನಾಕ್ ಕಳ್ಳನೊಬ್ಬ ಸಂಪೂರ್ಣ ಬೆತ್ತಲೆಯಾಗಿ ಮುಖಕ್ಕೆ ಮಾಸ್ಕ್ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿ 85 ಕ್ಕೂ ಹೆಚ್ಚು ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾನೆ.
ಮುಖಕ್ಕೆ ಮಾಸ್ಕ್ ಧರಿಸಿ ಬೆತ್ತಲೆಯಾಗಿ ಬಂದು ಕಳೆದ 8 ರಂದು ರಾತ್ರಿ ಬೊಮ್ಮನಹಳ್ಳಿಯ ಹೊಂಗಸಂದ್ರದ ಟೆಲಿಕಾಂ ಮೊಬೈಲ್ ಅಂಗಡಿ) ಶಾಪ್ನ ಗೋಡೆ ಕೊರೆದು ಆಮೂಲಕ ಒಳನುಗ್ಗಿ ವಿವಿಧ ಕಂಪನಿಯ 85 ಮೊಬೈಲ್ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.
ಮಾರನೇ ದಿನ ಬೆಳಗ್ಗೆ ಅಂಗಡಿ ಮಾಲೀಕ ಎಂದಿನಂತೆ ಬಂದು ಅಂಗಡಿ ಬೀಗ ತೆಗೆದು ಒಳಗೆ ಹೋದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಗಮನಿಸಿದಾಗ ಗೋಡೆ ಕೊರೆದು ಒಳನುಗ್ಗಿ ಮೊಬೈಲ್ಗಳ ಕಳ್ಳತನವಾಗಿರುವುದು ಗೊತ್ತಾಗಿದೆ.
ತಕ್ಷಣ ಅವರು ಸಿಸಿ ಕ್ಯಾಮೆರಾ ನೋಡಿದಾಗ ಕಳ್ಳ ಬೆತ್ತಲೆಯಾಗಿ ಬಂದು ಮೊಬೈಲ್ಗಳನ್ನು ಕಳ್ಳತನ ಮಾಡಿರುವುದು ಸೆರೆಯಾಗಿದೆ. ಕ್ಯಾಮರಾದಲ್ಲಿ ಸೆರೆಯಾಗುತ್ತದೆ. ಬಟ್ಟೆ ಜಾಡುಹಿಡಿದು ನನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂದು ತಿಳಿದು ಪೊಲೀಸರ ತನಿಖೆಯ ಹಾದಿ ತಪ್ಪಿಸಿಲು ಬೆತ್ತಲೆಯಾಗಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು ಬೆತ್ತಲೆ ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.
Previous Articleಚೈತ್ರಾ ಕುಂದಾಪುರ ಮತ್ತವರ ಪತಿ ಕಳ್ಳರಂತೆ
Next Article ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !
4 Comments
clomiphene cycle clomiphene cycle how can i get generic clomid tablets where can i get cheap clomiphene tablets can i order generic clomid prices clomiphene price at clicks can i order cheap clomiphene without rx
More articles like this would pretence of the blogosphere richer.
inderal 20mg for sale – plavix 75mg canada methotrexate generic
buy clavulanate generic – atbioinfo buy acillin sale