ಬೆಂಗಳೂರು,ಡಿ.7:
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9 ರಿಂದ 19 ವರಗೆ 9 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಕುಂದಾ ನಗರಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಅಧಿವೇಶನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿರುವ ಗೃಹ ಇಲಾಖೆ ವಿಧಾನಸೌಧ ಹಾಗೂ ಶಾಸಕ, ಸಚಿವರು, ಅಧಿಕಾರಿಗಳು ವಾಸ್ತವ್ಯ ಹೂಡುವ ಪ್ರದೇಶಗಳಿಗೆ 6 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಭದ್ರತಾ ಕಾರ್ಯಕ್ಕೆ 6 ಮಂದಿ ಎಸ್ಪಿಗಳು,10 ಹೆಚ್ಚುವರಿ ಎಸ್ಪಿಗಳು, 38 ಡಿವೈಎಸ್ಪಿಗಳು, 100 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ ಗಳು, 235 ಮಂದಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಳನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ .ಭದ್ರತೆಯ ನಿಗಾ ವಹಿಸಲು 30 ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ.
80ಷಕ್ಕೂ ಪ್ರದೇಶಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಅದೇ ರೀತಿ ನಗರದ ಬಂದೋಬಸ್ತ್ ಸಲುವಾಗಿ ರಸ್ತೆ ಬಂದೋಬಸ್ತ್, ಟ್ರಾಫಿಕ್ ಬಂದೋಬಸ್ತ್ ಸೇರಿ 20 ವಲಯಗಳನ್ನು ರಚಿಸಲಾಗಿದೆ
ಪ್ರತಿ ವಲಯಕ್ಕೂ ಓರ್ವ ಮೇಲ್ವಿಚಾರಕ ವೀಕ್ಷಕರನ್ನು ನೇಮಿಸಲಾಗಿದೆ. ಮುಖ್ಯ ವಲಯಗಳಲ್ಲಿ ಓರ್ವ ಎಸ್ಪಿ ರ್ಯಾಂಕ್ ಅಧಿಕಾರಿ ಇರುತ್ತಾರೆ. ಸುವರ್ಣ ವಿಧಾನಸೌಧ ವಲಯದಲ್ಲಿ ಒಬ್ಬರು ಎಸ್ಪಿ, ಡಿಎಸ್ಪಿ ಸೇರಿ ಮತ್ತಿತರ ಅಧಿಕಾರಿಗಳು ಇರಲಿದ್ದಾರೆ ಎಂದು
ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಇದರ ಜೊತೆಗೆ 35 ಕೆಎಸ್ ಆರ್ ಪಿ ತುಕಡಿಗಳು, 10 ಡಿಆರ್ ಸಿಆರ್, 8 ಕ್ಯುಆರ್ ಟೀಂ, 16 ಎಸಿ ಟೀಂ ಮಂಜೂರು ಆಗಿವೆ. ಬೆಂಗಳೂರಿನಿಂದ 1 ಗರುಡ ವಿಶೇಷ ಕಮಾಂಡೋ ಪಡೆ ಬರುತ್ತಿದೆ.ಸಿಬ್ಬಂದಿಗಾಗಿ 300 ಬಾಡಿ ವೋರ್ನ್ ಕ್ಯಾಮರಾ ತರಿಸಲಾಗುತ್ತಿದೆ. ಇದು ಪ್ರಪಂಚದಲ್ಲಿ ಬಹಳ ಉಪಯುಕ್ತವಾಗಿದೆ. ಏನೆಲ್ಲಾ ನಡೆಯುತ್ತಿದೆ ಎಂಬುದು ತನ್ನಿಂದ ತಾನೇ ವಿಡಿಯೋ ರೆಕಾರ್ಡ್ ಆಗುತ್ತದೆ ಎಂದು ಹೇಳಿದರು.
ಚಳಿಗಾಲ ಅಧಿವೇಶನದಲ್ಲಿ ಈವರೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು 55 ಅರ್ಜಿಗಳು, 5 ಮನವಿ ಸಲ್ಲಿಸುವ ಬಗ್ಗೆ ಅರ್ಜಿಗಳು ಬಂದಿವೆ. ಯಾವ ಪ್ರತಿಭಟನೆ ಪ್ರಮುಖ ಅಂತಾ ಹೇಳಲು ಆಗುವುದಿಲ್ಲ. ಎಲ್ಲವೂ ಪ್ರಮುಖ ಪ್ರತಿಭಟನೆಗಳೇ ಅಂತಾ ನಾವು ಪರಿಗಣಿಸುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಬೇಕು ಎಂದು ಯಡಾ ಮಾರ್ಟಿನ್ ಅಭಿಪ್ರಾಯ ಪಟ್ಟರು.
ಪ್ರತಿಭಟನೆಗೆ ಅವಕಾಶ:
ಪಂಚಮಸಾಲಿ ಸಮುದಾಯದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಈಗಾಗಲೇ ಸ್ವಾಮೀಜಿ ಅವರನ್ನು ಸಂಪರ್ಕಿಸಲಾಗಿದೆ. ಟ್ರಾಕ್ಟರ್ ರ‍್ಯಾಲಿ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕದಂತೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಸ್ವಾಮೀಜಿ ಸ್ಪಂದಿಸುವ ವಿಶ್ವಾಸವಿದೆ. ಆದರೂ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಿಗದಿತ ಸ್ಥಳದಲ್ಲಿ ಪ್ರತಿಭಟಿಸಿದರೆ ಸಮಸ್ಯೆ ಇಲ್ಲ. ಆದರೆ, ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರೆ ನಾವು ಅವರನ್ನು ತಡೆಯುತ್ತೇವೆ ಎಂದರು.
ಈ ಬಾರಿಯ ಅಧಿವೇಶನದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಸಾರ್ವಜನಿಕರು ಸಹಕಾರ ಕೊಟ್ಟರೆ ಅಧಿವೇಶನ ಸೂಪರ್ ಸಕ್ಸಸ್ ಆಗಲಿದೆ ಎಂದು ಪೊಲೀಸ್ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.

1 Comment
?Celebremos a cada emblema de las apuestas !
Jugar en casinoretirosinverificacion.com/ permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casinoretirosinverificacion. Gracias a esta flexibilidad, cada sesiГіn se vuelve mГЎs cГіmoda al usar servicios como casino sin verificaciГіn.
Jugar en casinos sin verificaciГіn permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casino sin dni. Gracias a esta flexibilidad, cada sesiГіn se vuelve mГЎs cГіmoda al usar servicios como casinos sin verificacion.
Casino crypto sin kyc, rГЎpido y sin esperas – п»їhttps://casinoretirosinverificacion.com/
?Que la suerte te beneficie con aguardandote magnificos botes destacados!