ಬೆಂಗಳೂರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಕಿರುಕುಳ ಮತ್ತು ವರ್ಗಾವಣೆಯಿಂದ ಬೇಸತ್ತು ಬೆಳಗಾವಿ ತಹಶೀಲ್ದಾರ್ ಕಚೇರಿಯ ಎಸಾಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಇದೀಗ ಆಟ ತಿರುವು ಸಿಕ್ಕಿದೆ.
ತಹಶಿಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಅವರದು ಆತ್ಮಹತ್ಯೆಯಲ್ಲ ಕೊಲೆ‘ ಎನ್ನುವ ಅನಾಮಧೇಯ ಪತ್ರವೊಂದು ರವಾನೆಯಾಗಿದೆ .
ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಬೆಳಗಾವಿ ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಈ ಪತ್ರ ಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಂಚೆ ಮೂಲಕ ಬಂದಿರುವ ಈ ಅನಾಮದೇಯ ಪತ್ರದಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಲಾಗಿದ್ದು ಇದೀಗ ಇಡೀ ಪ್ರಕರಣದ ತನಿಖೆಯ ದಿಕ್ಕು, ಬದಲಾಗುವಂತಾಗಿದೆ.
ಅನಾಮಧೇಯ ಪತ್ರದಲ್ಲಿ,ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಆತನನ್ನು ಕೊಲೆಮಾಡಲಾಗಿದೆ ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಈ ಕೊಲೆಯ ಸೂತ್ರದಾರ ಎಂದು ಹೇಳಲಾಗಿದೆ.
ತಹಶಿಲ್ದಾರರ ಜೀಪ್ ಪರಿಶೀಲನೆ ಮಾಡಿದರೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಿಗುತ್ತವೆ.
ಆದರೆ ವಿಷಯ ಅಂತರ ಮಾಡುವ ದೃಷ್ಟಿಯಿಂದ ಕೊಲೆಯನ್ನು ಆತ್ಮಹತ್ಯೆ ಎನ್ನುತ್ತಿದ್ದಾರೆ. ಆದರೆಇದು ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಪತ್ನಿ ರುದ್ರೇಶ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು.ಅವನ ಎಲ್ಲ ದುಡ್ಡು ಆಕೆ ಹೊಡೆದಿರುತ್ತಾಳೆ. ಈ ಕಾರಣಕ್ಕಾಗಿ ಕೊಲೆ ನಡೆದಿದೆ ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು’ ಎಂದು ಉಲ್ಲೇಖಿಸಲಾಗಿದೆ
Previous Article5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!
Next Article ಚಿರತೆ ದಾಳಿ ಹೇಗಿತ್ತು ನೋಡಿ.