ಬೆಂಗಳೂರು, ಡಿ.16-ಮದ್ಯದ ಅಮಲಿನಲ್ಲಿ ಮಧ್ಯ ರಾತ್ರಿ ವೇಳೆ ಬೇರೆಯವರ ಮನೆ ಬಾಗಿಲು ಬಡಿಯುತ್ತಿದ್ದ ವ್ಯಕ್ತಿಯನ್ನು ಥಳಿಸಿ ಕೊಲೆ ಮಾಡಿರುವ ಅಮಾನವೀಯ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ
ನಡೆದಿದೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸಿ ಮಂಜುನಾಥ್ ಕೊಲೆಯಾದವರು,ಮದ್ಯವ್ಯಸನಿಯಾಗಿದ್ದ ಮಂಜುನಾಥ್ ನನ್ನು ಆತನ ಕಾಟ ತಾಳದ ಪತ್ನಿ ಹಾಗೂ ಮಕ್ಕಳು ಕಳೆದ 7 ತಿಂಗಳ ಹಿಂದೆಯೇ ಮನೆಯಿಂದ ಹೊರ ಹಾಕಿದ್ದರು.
ಗೌರಿಬಿದನೂರಿಗೆ ಹೋಗಿದ್ದ ಮಂಜುನಾಥ್ ಕೂಲಿ-ನಾಲಿ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದು,ಎರಡು ದಿನಗಳ ಹಿಂದೆ ಗೌರಿಬಿದನೂರಿನ ಕರೇಕಲ್ಲಹಳ್ಳಿಯ ಸ್ವಾಗತ್ ಬಡಾವಣೆಯಲ್ಲಿ ಮಧ್ಯರಾತ್ರಿ 2ರ ವೇಳೆ ಕುಡಿದ ಅಮಲಿನಲ್ಲಿ ಮನೆ ಬಾಗಿಲು ತಟ್ಟಿದ್ದಾನೆ.
ಮನೆಬಾಗಿಲು ತಟ್ಟಿದ ಹಿನ್ನೆಲೆಯಲ್ಲಿ ಹೆದರಿದ ಅಂಬರೀಶ ಅಕ್ಕಪಕ್ಕದ ಮನೆಗಳಿಗೆ ಫೋನ್ ಮಾಡಿ ತಿಳಿಸಿದ್ದು,ಅಕ್ಕಪಕ್ಕದ ಮನೆಯ ನಿವಾಸಿಗಳಾದ ಸುನಿಲ್, ಕೈಲಾಶ್ ಆಗಮಿಸಿ ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ನೀಡದೇ ಅನುಮಾನಸ್ಪದವಾಗಿ ವರ್ತಿಸಿದ ಕಾರಣ ಮೂವರು ಕೈಗೆ ಸಿಕ್ಕ ಪೈಪ್, ದೊಣ್ಣೆಗಳಿಂದ ಹೊಡೆದಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಮಂಜುನಾಥನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾನೆ.
ಮಂಜುನಾಥನ ಸಂಬಂಧಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಬರೀಶ, ಸುನಿಲ್, ಕೈಲಾಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
2 Comments
ГК Айтек https://multimedijnyj-integrator.ru/ .
Вывод из запоя на дому http://fizioterapijakeskic.com/ .