ಬೆಂಗಳೂರು,ಮಾ.8-
ಮಹಾನಗರ ಬೆಂಗಳೂರಿನಲ್ಲಿ ರೌಡಿಗಳ ಪುಂಡಾಟ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ಬೈಕ್ ಚಲಾಯಿಸುತ್ತಾ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ರೌಡಿ ಸಿದ್ದಿಕಿಯನ್ನು ಶಿವಾಜಿನಗರ
ಪೊಲೀಸರು ಬಂಧಿಸಿದ್ದಾರೆ.
ರೌಡಿ ಸಿದ್ದಿಕಿ ಶಿವಾಜಿನಗರದ ಬಂಬೂ ಬಜಾರ್‌ನಲ್ಲಿ ಲಾಂಗ್ ಹಿಡಿದು ಬೈಕ್ ಸವಾರಿ ಮಾಡುತ್ತಿದ್ದ ವೀಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿ ವೈರಲ್ ಆಗಿತ್ತು.
ವೀಡಿಯೋ ಆಧಾರದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಸಿಕೊಂಡು ತನಿಖೆ ವೇಳೆ ಕೈಗೊಂಡ ಶಿವಾಜಿನಗರ ಪೊಲೀಸರಿಗೆ ಆರೋಪಿಯು ರೌಡಿಶೀಟರ್ ಎಂಬ ವಿಚಾರ ಬೆಳಕಿಗೆ ಬಂದಿದೆ.ಇದೀಗ ಶಸ್ತ್ರಾಸ್ತ್ರ ಕಾಯ್ದೆಯಡಿ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ವಿಚಾರಣೆಯಲ್ಲಿ ಆತನ ವಿರುದ್ಧ 17 ಅಪರಾಧ ಪ್ರಕರಣಗಳು ಇರುವುದು ಪತ್ತೆಯಾಗಿದೆ. ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಕೂಡ ಜಾರಿಯಾಗಿತ್ತು. ಆರೋಪಿಯನ್ನು ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ