ಹೈದರಾಬಾದ್:
ಮಾಜಿ ಯೋಧನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಬಳಿಕ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಇರಿಸಿ ಬೇಯಿಸಿದ ಭಯಾನಕ ಘಟನೆ ನಗರದಲ್ಲಿ ನಡೆದಿದೆ.
ಕೌಟುಂಬಿಕ ಕಲಹದಿಂದ ಬೇಸತ್ತ ಮಾಜಿ ಯೋಧ
ಗುರುಮೂರ್ತಿ(45) ತನ್ನ ಪತ್ನಿ ವೆಂಕಟ್ ಮಾಧವಿ(35)ಯನ್ನು ಪತಿ ಭೀಭತ್ಸವಾಗಿ ಕೊಲೆ ಮಾಡಿದ್ದಾನೆ.
ಕಳೆದ ಜನವರಿ 16ರಂದು ಈ ಘಟನೆ ನಡೆದಿದೆ ಪತ್ನಿಯನ್ನು ಹತ್ಯೆ ಮಾಡಿದ ನಂತರ ಆತನೇ ಪೊಲೀಸ್ ಠಾಣೆಗೆ ತೆರಳಿ ನನ್ನ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡಿದಾಗ ಪೊಲೀಸರಿಗೆ ಆಕೆಯ ಪತಿ ಗುರುಮೂರ್ತಿಯ ಮೇಲೆಯೇ ಅನುಮಾನ ಬಂದಿದೆ.
ಹೀಗಾಗಿ ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆತ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಗುರುಮೂರ್ತಿ, ತನ್ನ ಪತ್ನಿ ವೆಂಕಟ ಮಹಾದೇವಿಯನ್ನು ಕೊಲೆ ಮಾಡಿದ್ದಾನೆ.ಆನಂತರ ಮೃತ ದೇಹವನ್ನು ಬಾತ್‌ರೂಮ್‌ನಲ್ಲಿ ಹಲವು ಭಾಗಗಳಾಗಿ ಕತ್ತರಿಸಿ ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ್ದಾನೆ.
ಬಳಿಕ ಮಾಂಸವನ್ನು ಮೂಳೆಯಿಂದ ಬೇರ್ಪಡಿಸಿದ್ದಾನೆ. ಬಳಿಕ ಮೂಳೆಗಳನ್ನು ಕುಟಾಣಿಯಿಂದ ಹುಡಿಮಾಡಿ ಮತ್ತೆ ಬೇಯಿಸಿದ್ದಾನೆ. ಮೂರು ದಿನಗಳ ಕಾಲ ಆತ ಹಲವು ಬಾರಿ ಮೂಳೆ ಹಾಗೂ ಮಾಂಸವನ್ನು ಬೇಯಿಸಿದ ನಂತರ ಅದನ್ನು ಪ್ಯಾಕ್ ಮಾಡಿ ಬಳಿಕ ಮೀರ್‌ಪೇಟ್ ಬಳಿಯ ಕೆರೆಗೆ ಎಸೆದಿದ್ದಾನೆ.
ಕೊಲೆ ಮಾಡಿದ ಗುರುಮೂರ್ತಿ ಮಾಜಿ ಯೋಧನಾಗಿದ್ದು, ಪ್ರಸ್ತುತ ಡಿಆರ್‌ಡಿಒ ದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ದಂಪತಿಗೆ ಒಂದು ಗಂಡು ಒಂದು ಹೆಣ್ಣು ಸೇರಿ ಇಬ್ಬರು ಮಕ್ಕಳಿದ್ದರು. ಈ ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ. ಆದರೆ ಕೊಲೆ ಏಕೆ ಹಾಗೂ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Previous Articleತಿರುಪತಿಯಲ್ಲಿ ರೂಮ್ ಬೇಕಾದರೆ ಹೀಗೆ ಮಾಡಿ
Next Article ಮುಡಾ ಹಗರಣದಲ್ಲಿ ಸಿಎಂ ಪಾತ್ರ ಗೊತ್ತಾ ?