ಬೆಂಗಳೂರು,ಏ.7-
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮೂಲಕ ಫಲಾನುಭವಿಗಳಿಗೆ ನೀಡಬೇಕಾದ 97 ಕೋಟಿ ರೂಪಾಯಿಗಳನ್ನು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ವ್ಯವಸ್ಥಿತವಾಗಿ ಗುಳುಂ ಮಾಡಿದ್ದಾರೆ
ಅವ್ಯವಹಾರ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ 97 ಕೋಟಿ ರೂಗಳು ದುರುಪಯೋಗ ಮಾಡಿರುವುದು ಪತ್ತೆಯಾಗಿದೆ.
ಏಜೆಂಟರ ಮೂಲಕ ನಕಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ನಿಗಮದ ವಿವಿಧ ಯೋಜನೆಗಳ ಹೆಸರಿನಲ್ಲಿ ಆ ಖಾತೆಗಳಿಗೆ
ಹಣ ವರ್ಗಾವಣೆ ಮಾಡಲಾಗಿದೆ.ಬಳಿಕ ಈ ಖಾತೆಗಳಿಗೆ ಜಮಾ ಆದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದನ್ನು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಂಧಿತ ಬಿ. ಕೆ. ನಾಗರಾಜಪ್ಪ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ದಾಳಿ ವೇಳೆ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಬಂಧಿಸಿರುವ ನಾಗರಾಜಪ್ಪ, ಹಲವು ನಕಲಿ ಫಲಾನುಭವಿಗಳ ಖಾತೆಗಳನ್ನು ಬಳಸಿಕೊಂಡು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಹಗರಣದ ಸಂಬಂಧ ಬಂಧಿತ ನಾಗರಾಜಪ್ಪರನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಅಂಬೇಡ್ಕರ್ ರಸ್ತೆಯಲ್ಲಿನ ವಿವಿ ಟವರ್‌ನಲ್ಲಿರುವ ನಿಗಮದ ಕಚೇರಿ ಸೇರಿದಂತೆ ಹಗರಣದ ಆರೋಪಿಗಳು, ಅನುಮಾನಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಏಪ್ರಿಲ್ 4ರಂದು ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.
ಪರಿಶೀಲನೆ ವೇಳೆ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು, ಡಿಜಿಟಲ್ ದಾಖಲೆಗಳು, ಆಸ್ತಿ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ
Previous Articleನಿರ್ಲಕ್ಷ್ಯ ಕ್ಕೆ ಬಲಿಯಾದವರೆಷ್ಟು ಗೊತ್ತೇನು
Next Article ಶಾಲಾ ಶಿಕ್ಷಕರೇ ಹುಷಾರ್