ಬೆಳಗಾವಿ – ರಾಜ್ಯದಲ್ಲಿ ಇದೀಗ ಎಲ್ಲಿ ನೋಡಿದರೂ ಭ್ರಷ್ಟಾಚಾರದ್ದೇ ಸುದ್ದಿ, ಕಮಿಷನ್ ಆರೋಪದ ಮಾತುಗಳು. ಇವುಗಳಿಂದ ಪ್ರೇರೇಪಿತರಾದ ಹಲವರು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ವಾವ್ ಇದೊಂದು ಒಳ್ಳೆಯ ಬೆಳವಣಿಗೆ ಜನರು ಪ್ರಶ್ನೆ ಮಾಡಲಾರಂಭಿಸಿದ್ದಾರೆ ಅನ್ತೀರಾ..
ಹಾಗೆಂದು ಕೊಂಡರೆ ಅದು ತಪ್ಪು ಯಾಕೆ ಗೊತ್ತಾ ಈ ರೀತಿ ಪ್ರಶ್ನೆ ಮಾಡಿದವರನ್ನು ಶಾಸಕರೊಬ್ಬರು ಜೈಲಿಗೆ ಹಾಕಿಸಿದಾರೆ
ಅರೆ ಇದೇನಿದು ಇದು ಎಲ್ಲಿ ಅಂತಿರಾ..ಹಾಗಾದರೆ ಈ ಸ್ಟೋರಿ ನೋಡಿ,ಅದಕ್ಕೂ ಮೊದಲು ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ, ಷೇರ್ ಮಾಡಿ..
ಈ ಘಟನೆ ನಡೆದಿದ್ದು ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ,
ಬೆಳಗಾವಿಯ ಬಿಜೆಪಿ ಕುಡಚಿ ಮಂಡಲ ವತಿಯಿಂದ ಹಾರೂಗೇರಿ ಪಟ್ಟಣದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಶಾಸಕ ಪಿ. ರಾಜೀವ್ ಅವರು ತಮ್ಮ ಕ್ಷೇತ್ರದ ರಸ್ತೆಗಳ ವಿಷಯ ಪ್ರಸ್ತಾಪಿಸಿದ್ದಾರೆ ಇದನ್ನು ಕೇಳಿಸಿಕೊಂಡ ಕುಡಚಿ ಕ್ಷೇತ್ರದ ಯುವಕರು ಶಾಸಕರು ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದಂತೆ ಬಸ್ತವಾಡ ರಸ್ತೆ ಕಾಮಗಾರಿ ಕಳಪೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಶಾಸಕರ ವಿರುದ್ಧ ರಸ್ತೆ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲು ಎಷ್ಟು ಎಂದು ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಪ್ರಶ್ನಿಸಿದ್ದಾರೆ. ಜತೆಗೆ ಕ್ಷೇತ್ರದ ಸಮಸ್ಯೆಗಳನ್ನು ಶಾಸಕರಿಗೆ ಭಿತ್ತಿಪತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಯುವಕರು ಕ್ಷೇತ್ರದ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ಪ್ರಶ್ನಿಸುತ್ತಿದ್ದಂತೆ ಶಾಸಕ ಪಿ. ರಾಜೀವ್ ಗರಂ ಆಗಿದ್ದಾರೆ.
ಅಲ್ಲದೆ ಕಳಪೆ ಕಾಮಗಾರಿ ಎಂದು ಭಿತ್ತಿ ಪತ್ರ ಪ್ರದರ್ಶಿಸಿದ ಯುವಕನ ಬಳಿ ‘ಏನು ದಾಖಲೆ ಇದೆ ಇದಕ್ಕೆ?’ ಎಂದು ಕೇಳಿದ್ದಾರೆ. ಈ ವೇಳೆ ಯುವಕರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣವೇ ಪಕ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಯುವಕರನ್ನು ಅರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರದ ಮೇಲೆ ಕೇಸ್ ಮಾಡುವುದಾಗಿ ಶಾಸಕ ಪಿ. ರಾಜೀವ್ ಅವಾಜ್ ಹಾಕಿದ್ದಾರೆ. ಇದನ್ನು ಕೇಳಿಸಿಕೊಂಡ ಪೊಲೀಸರು ಸುಮ್ಮನಿರುತ್ತಾರಾ ತಕ್ಷಣವೇ ಅವರು ಆ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಪಾಪ ಇದೀಗ ಯುವಕರು ಠಾಣೆಗೆ ಹೋಗಿ ಬೇಲ್ ಕೊಟ್ಟು ಹೊರಬಂದಿದ್ದಾರೆ.