ಬೆಂಗಳೂರು,ಮಾ.5-
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಸಮರ ಸಾರಿರುವ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರ ನಡೆ ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಮಂತ್ರಿ ಕೆ ಎನ್ ರಾಜಣ್ಣ ತಮ್ಮ ವಿರುದ್ಧ ನಿರಂತರವಾಗಿ ಕಟು ಟೀಕೆ ಮಾಡುತ್ತಿದ್ದರೂ ಲೆಕ್ಕಿಸದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ Election ಕುರಿತಂತೆ ಸಹಕಾರ ಮಂತ್ರಿ ರಾಜಣ್ಣ ಅವರ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
ಪಕ್ಷದ ಅಧ್ಯಕ್ಷರಾಗಿರುವ ಅವರು ತಮ್ಮ ಬಿಗುಮಾನ ಮರೆತು ಈ ವಿಷಯದ ಕುರಿತು ಚರ್ಚೆಗಾಗಿ ತಮ್ಮ ಕಚೇರಿಗೆ ಬರುವುದಾಗಿ ತಿಳಿಸಿ ರಾಜಣ್ಣ ಅವರ ಕಚೇರಿಗೆ ತೆರಳಿ ಕಾದರೂ ಕೂಡ ರಾಜಣ್ಣ ಅವರನ್ನು
ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಅನಾರೋಗ್ಯ ಮತ್ತು ವಿಧಾನಸಭೆಯ ಕಲಾಪದ ಷನೆಪವೊಡ್ಡಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಹಿಂದೇಟು ಹಾಕಿದ ಮಂತ್ರಿ ರಾಜಣ್ಣ ಇದಾದ ನಂತರ ರಾತ್ರಿ ಎಸ್‌ಟಿ ಸಮುದಾಯದ ಶಾಸಕ ಸಭೆಗೆ ಹಾಜರಾಗಿದ್ದು ಭಾರೀ ಕುತೂಹಲ ಮೂಡಿಸಿದೆ.
ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಮತ್ತು ವಾಲ್ಮೀಕಿ ಸಮುದಾಯದ ಮಠಾಧೀಶರ ನೇತೃತ್ವದಲ್ಲಿ ನಡೆದ ವಾಲ್ಮೀಕಿ ಸಮುದಾಯದ ಶಾಸಕರ ಸಭೆಯಲ್ಲಿ ರಾಜಣ್ಣ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಈ ಸಭೆಯಲ್ಲಿ ಪ್ರಮುಖವಾಗಿ ಶೋಷಿತ ಸಮುದಾಯಗಳ ಸಮಾವೇಶ ನಡೆಸುವುದು ಹಾಗೂ ವಾಲ್ಮೀಕಿ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತಂತೆ ಚರ್ಚೆ ನಡೆದಿದೆ.
ಇದೆ ವೇಳೆ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬಿಡುಗಡೆ ಕೋರಿರುವ ಸಚಿವ ಕೆ ಎನ್ ರಾಜಣ್ಣ ಅವರನ್ನು ತುಮಕೂರು ಅಥವಾ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು. ಮಂತ್ರಿಮಂಡಲ ಪುನರ್ ರಚನೆಯ ಸಮಯದಲ್ಲಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಕುರಿತಂತೆ ಚರ್ಚೆಗಳು ನಡೆದಿದೆ ಒಂದು ವೇಳೆ ಇಂತಹ ಪ್ರಸಂಗ ಉಂಟಾದರೆ ಎಲ್ಲ ಶಾಸಕರು ರಾಜಣ್ಣ ಅವರನ್ನು ಬೆಂಬಲಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪದಲ್ಲಿ ಮಂತ್ರಿ ಸ್ಥಾನ ತೊರೆದಿರುವ ನಾಗೇಂದ್ರ ಅವರನ್ನು ತಕ್ಷಣವೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಹಾಗೂ ರಘುಮೂರ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಮೇಲೆ ಒತ್ತಡ ಹೇರಲು ಈ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.
Previous Articleಯಾರಾಗುತ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ.
Next Article ರಾಜ್ಯ ಬಿಜೆಪಿ ಬಗ್ಗೆ ಬಿಜೆಪಿ ಸಂಸದನಿಗೆ ಅತೀವ ಬೇಸರ