ಬೆಂಗಳೂರು,ನ.30-
ಕಲ್ಟ್ ಚಿತ್ರತಂಡದ ಯಡವಟ್ಟಿನಿಂದಾಗಿ ಟೆಕ್ನಿಷಿಯನ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ಹಿನ್ನೆಲೆಯಲ್ಲಿ ಸಿನಿಮಾ ನಟ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಿತ್ರತಂಡದ ಯಡವಟ್ಟಿನಿಂದಾಗಿ ಡ್ರೋನ್ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬ ಸದಸ್ಯರು
ಕಲ್ಟ್ ಚಿತ್ರದ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಕಳೆದ ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಚಿತ್ರೀಕರಣ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಮಾರ್ಟಿನ್, ಯುವ ಸೇರಿದಂತೆ ಹಲವು ಸಿನಿಮಾಗಳಿಗೆ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿರುವ ಸಂತೋಷ್ ಸ್ವಂತವಾಗಿ ಡ್ರೋನ್ ಹೊಂದಿದ್ದರು.
25 ಲಕ್ಷ ರೂ. ಸಾಲ ಮಾಡಿ ಡ್ರೋನ್ ಖರೀದಿಸಿದ್ದ ಸಂತೋಷ್ ಸಿನಿಮಾ ಶೂಟಿಂಗ್‌ಗಾಗಿ ದಿನಕ್ಕೆ 25 ಸಾವಿರ ರೂ. ನಿಗಧಿಮಾಡಿದ್ದರು.ಇದೇ ಆಧಾರದಲ್ಲಿ ಕಲ್ಟ್ ಚಿತ್ರಕ್ಕೂ ಶೂಟಿಂಗ್ ಮಾಡುವ ಕೆಲಸಕ್ಕೆ ಒಪ್ಪಿಕೊಂಡಿದ್ದರು.
ಅದರಂತೆ ಚಿತ್ರದುರ್ಗದ ಹಲವೆಡೆ ಶೂಟಿಂಗ್ ಮಾಡಲಾಗುತ್ತಿದೆ.ಹೀಗಿರುವಲ್ಲಿ ವಿಂಡ್ ಫ್ಯಾನ್ ಗಳು ಹೆಚ್ಚಾಗಿರುವ ಕಡೆ ಶೂಟಿಂಗ್ ಮಾಡಲು ಸಂತೋಷ್ ಗೆ ಹೇಳಿದ್ದಾರೆ.ಆದರೆ ಇಲ್ಲಿ ಡ್ರೋನ್‌ನಲ್ಲಿ ಚಿತ್ರೀಕರಣ ಮಾಡುವುದು ಕಷ್ಟ ಇದೆ ಎಂದು ಹೇಳಿದ್ದಾರೆ.
ಆದರೆ ಅದನ್ನು ಕೇಳದ ನಿರ್ದೇಶಕರು ಮಾಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಏನಾದರೂ ತೊಂದರೆ ಆದರೆ ನಷ್ಟ ಭರಿಸುವುದಾಗಿ ಭರವಸೆ ನೀಡಿದ್ದಾರೆ ಇದರಿಂದ ಬೇರೆ ದಾರಿ ಇಲ್ಲದೆ ಆತ ಶೂಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಡ್ರೋನ್ ವಿಂಡ್ ಫ್ಯಾನ್‌ಗೆ ತಗುಲಿ ಪೀಸ್ ಪೀಸ್ ಆಗಿತ್ತು.
ಇದರಿಂದ ಆಘಾತಗೊಂಡ ಆತ ತನಗಾದ ನಷ್ಟ ಭರಿಸಲು ಮನವಿ ಮಾಡಿದ್ದಾರೆ ಆದರೆ ಇದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಚಿತ್ರದ ನಿರ್ಮಾಪಕರಾದ ನಟ ಜೈದ್ ಅವರು ಸಂತೋಷ್ ಬಳಿ ವೈಟ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದೂವರೆ ಲಕ್ಷ ರೂ. ಮೌಲ್ಯದ ಫುಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ.
ಆಧಾರ್ ಕಾರ್ಡ್ ನಂಬರ್ ಸಹ ಬರೆಸಿಕೊಂಡು ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಈ ಘಟನೆ ಬಳಿಕ ಸಂತೋಷ್ ಸಹೋದರಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾದರು. ಆದರೆ ಪೊಲೀಸರು ದೂರು ಸ್ವೀಕರಿಸದೇ ವಾಪಸ್ ಕಳುಹಿಸಿದ್ದರು ಎನ್ನುವ ಆರೋಪವೂ ಇದೆ. ಇದಾದ ನಂತರ ಆಸ್ಪತ್ರೆಯ ಮೇಮೊ ಮೇಲೆ ಎನ್‌ಸಿಆರ್ ದಾಖಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ʻಕಲ್ಟ್ʼ ಚಿತ್ರತಂಡವನ್ನ ಸಂಪರ್ಕಿಸಿದ್ದಾರೆ. ಘಟನೆ ಸಂಬಂಧ ಸಿನಿಮಾ ನಿರ್ದೇಶಕನಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
Previous Articleಮಂತ್ರಿಮಂಡಲಕ್ಕೆ ನಾಗೇಂದ್ರ ಸೇರ್ಪಡೆ
Next Article ನಿಮಗೆ Scented Candles ಇಷ್ಟನಾ?