ಬೆಂಗಳೂರು,ಫೆ.15-
ಹಲವು ಬಾರಿ ವಾರೆಂಟ್ ಜಾರಿಗೊಳಿಸಿದರೂ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ತನ್ನ ಮಗನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಣಿಸಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.
ನ್ಯಾಯಾಲಯದಲ್ಲಿ ವಾರಂಟ್ ಜಾರಿಯಾದರೂ ಸಹ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಫಾರೂಕ್ ಅಲಿಯಾಸ್ ಮೋಟಿ ಎಂಬಾತ ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ 12 ವರ್ಷಗಳ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಫಾರೂಕ್ ವಿರುದ್ಧ 2015ರಲ್ಲಿ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು.
ಆದರೆ, ಫಾರೂಕ್ 2022ರ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಫಾರೂಕ್‌ಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಈ ಖದೀಮ ತನ್ನ ಮೊಬೈಲ್ ನಂಬರ್, ಹಾಗೂ ವಾಸಸ್ಥಳ ಬದಲಿಸಿಕೊಂಡು ಪೊಲೀಸರ ಕಣ್ಣಿಗೆ ಮಣ್ಣೆರೆಸಿಕೊಂಡು ಆರಾಮಾಗಿ ಇದ್ದ. ಅಷ್ಟೇ ಅಲ್ಲ ಎರಡನೇ ಮದುವೆಯಾಗಿ ದೊಡ್ಡಕಲ್ಲಸಂದ್ರದಲ್ಲಿ ವಾಸವಾಗಿದ್ದ ಫಾರೂಕ್, ತನ್ನ ತಂದೆಯ ಸಾವಿನ ನಂತರ ಅಂತ್ಯಕ್ರಿಯೆಗೂ ಸಹ ಬಾರದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ.
ಇನ್ಸ್ಟಾಗ್ರಾಂನಿಂದ ಸಿಕ್ಕಿಬಿದ್ದ:
ಇತ್ತೀಚೆಗೆ ಇನ್‌ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ ಮೊಹಮ್ಮದ್ ಫಾರೂಕ್‌ನ ಫೋಟೋ ಪ್ರಕಟಿಸಲಾಗಿತ್ತು. ಫೋಟೋ ಪ್ರಕಟವಾದ ಇನ್‌ಸ್ಟಾಗ್ರಾಂ ಐಡಿ, ಐಪಿ ಅಡ್ರೆಸ್ ಪರಿಶೀಲನೆ ನಡೆಸಿದಾಗ ಅದು ಮೊಹಮ್ಮದ್ ಫಾರೂಕ್‌ನ ಮಗನ ಹೆಸರಿನಲ್ಲಿರುವ ಮೊಬೈಲ್ ನಂಬರ್‌ನ ಆಧಾರದಲ್ಲಿ ಆ ಐಡಿ ಕ್ರಿಯೇಟ್ ಆಗಿರುವುದು ಪತ್ತೆಯಾಗಿತ್ತು.
ಅಲ್ಲದೇ ಅದೇ ನಂಬರ್‌ನಿಂದ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆ ಆರ್ಡರ್‌ಗಳು ಪ್ಲೇಸ್‌ಮೆಂಟ್ ಆಗುತ್ತಿದ್ದ ಮಾಹಿತಿ ಆಧಾರದಲ್ಲಿ ಮೊಹಮ್ಮದ್ ಫಾರೂಕ್‌ನ ವಿಳಾಸವನ್ನ ಪೊಲೀಸರು ಪತ್ತೆಹಚ್ಚಿದ್ದರು.
ನಂತರ ಆತನ ಚಲನವಲನಗಳ ಕುರಿತು ನಿಗಾವಹಿಸಿ, ಕೊನೆಗೆ ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ
Previous ArticleInfosys ಗೆ ಹೇಳೋರು ಕೇಳೋರು ಯಾರೂ ಇಲ್ಲವಾ.?
Next Article ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ಅಧಿಪತಿ