ಬೆಂಗಳೂರು,ಮಾ.18-ದಾರಿಯಲ್ಲಿ ಬೈಕ್ ನಿಲ್ಲಿಸಿ ಹತ್ತಿರ ಬಂದವನಿಗೆ ಮಚ್ಚಾ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡು ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿದೆ.
ಹಲ್ಲೆಗೊಳಗಾದ ಕೀರ್ತಿ ಕುಮಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹಲ್ಲೆ ನಡೆಸಿದ ಭಾವ ಹಾಗೂ ಭಾಮೈದುನರಾದ ಸುನೀಲ್ ಮತ್ತು ಗಣೇಶ್ ನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಮಾ.14ರಂದು ರಾತ್ರಿ ಕೀರ್ತಿ ಕುಮಾರ್ ಎಂಬಾತನಿಗೆ ಸುನೀಲ್, ಗಣೇಶ್‌ರಿಂದ ಚಾಕು ಇರಿದಿದ್ದ ಘಟನೆ ನಡೆದಿತ್ತು.ಮಧು, ಮಹೇಶ್ ಇಬ್ಬರು ವೈನ್ಸ್ ಸ್ಟೋರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಮಧು ಹಾಗೂ ಮಹೇಶ್ ಇಬ್ಬರೂ ಕೀರ್ತಿ ಕುಮಾರ್‌ನ ಸ್ನೇಹಿತರಾಗಿದ್ದರು. ಇಬ್ಬರ ಗಲಾಟೆಯನ್ನು ರಾಜಿ ಮಾಡಿಸಲು ಭೀಮೇಶ್ ಬಳಿ ಕೀರ್ತಿ ಕುಮಾರ್ ಕರೆದುಕೊಂಡು ಹೋಗಿದ್ದನು.
ಈ ವೇಳೆ ಸುನೀಲ್ ಎಂಬಾತ ಕುಡಿದು ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಜನರ ಗುಂಪು ನೋಡಿ ಬೈಕ್ ನಿಲ್ಲಿಸಿದ್ದು ಆತನನ್ನು ನೋಡಿದ್ದ ಕೀರ್ತಿ ಕುಮಾರ್, ಏನೋ ಗಾಡಿ ನಿಲ್ಲಿಸಿದ್ದಿಯಾ ನಡಿಯೋ `ಮಚ್ಚಾ’ ಎಂದಿದ್ದ. ನನ್ನನ್ನೇ ಮಚ್ಚಾ ಎಂದು ಕರೆಯುತ್ತೀಯಾ ಎಂದು ಸುನೀಲ್ ಆವಾಜ್ ಹಾಕಿದ್ದ. ಮನೆಗೆ ತೆರಳಿ ಬಾಮೈದ ಗಣೇಶ್‌ನನ್ನ ಕರೆದುಕೊಂಡು ಬಂದಿದ್ದ. ಬಳಿಕ ಬಾವ, ಬಾಮೈದ ಸೇರಿ ಕೀರ್ತಿ ಕುಮಾರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳಾದ ಸುನೀಲ್ ಹಾಗೂ ಗಣೇಶ್ ಇಬ್ಬರನ್ನೂ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ
Previous Articleದರೋಡೆ ಗ್ಯಾಂಗ್ ದಾವಣಗೆರೆಯಲ್ಲಿ
Next Article ಕಾಂಗ್ರೆಸ್ ಕಾರ್ಯಕರ್ತೆಗೆ ಹೊಡೆದರಾ ರೇವಣ್ಣ !