ಮಡಿಕೇರಿ ಜನರ ಭರವಸೆಯ ಬೆಳಕು, ಮಂತರ್ ಗೌಡಬೆಂಗಳೂರು.
ಪ್ರಾಕೃತಿಕ ರಮಣೀಯ ಸುಂದರ ತಾಣ ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಖ್ಯಾತಿ ಪಡೆದಿದೆ. ಆತಿಥ್ಯ ಮತ್ತು ವಿಭಿನ್ನ ಸಂಸ್ಕೃತಿಗೆ ಹೆಸರಾದ ಕೊಡಗಿನ ಜನರು ರಾಜಕೀಯವಾಗಿ ಕೂಡ ಅತಿ ಹೆಚ್ಚು ಜಾಗರೂಕರಾಗಿದ್ದಾರೆ.
ದೇಶ ವಿದೇಶಗಳ ಸಮಕಾಲಿನ ಆಗು ಹೋಗುಗಳ ಕುರಿತು ಅಪಾರ ತಿಳುವಳಿಕೆಯುಳ್ಳ ಈ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗಲು ಕೂಡ ಅತ್ಯಂತ ಎಚ್ಚರಿಕೆ ಮತ್ತು ಜಾಗರೂಕತೆಯನ್ನು ವಹಿಸುತ್ತಾರೆ.
ಇಂಥಾ ರಾಜಕೀಯ ಜಾಣ್ಮೆಯ ಪರಿಣಾಮವಾಗಿ ಈ ಬಾರಿ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮಂತರ್ ಗೌಡ ತಮ್ಮ ವೈಶಿಷ್ಟ್ಯ ಪೂರ್ಣವಾದ ನಡವಳಿಕೆ, ಶಿಕ್ಷಣ, ಜನಸಾಮಾನ್ಯರ ಕುರಿತ ಕಾಳಜಿ ರಾಜಕೀಯ ಪ್ರಜ್ಞೆ, ಕೃಷಿ ವ್ಯಾಪಾರ ಪರಿಸರ ಮತ್ತು ಪ್ರವಾಸೋದ್ಯಮದ ಬಗ್ಗೆ ಇರುವ ವಿಶೇಷವಾದ ದೃಷ್ಟಿಕೋನ ಮತ್ತು ಬದ್ದತೆಯಿಂದ ಗಮನ ಸೆಳೆಯುತ್ತಾರೆ.
ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಮಂತರ್ ಗೌಡ ಅವರ ತಂದೆ ಎ.ಮಂಜು ಎಲ್ಲಾ ರಾಜಕೀಯ ಪಟ್ಟುಗಳನ್ನು ಬಲ್ಲ ನಿಷ್ಣಾತ.ಅಜ್ಜಿ ಸೋಮವಾರಪೇಟೆಯ ಸಾಕಮ್ಮ ಕೊಡಗಿನ ಮನೆ ಮಾತು. ಕೊಡಗಿನ ಕಾಫಿ ಕೃಷಿ ಪರಂಪರೆಗೆ ತಮ್ಮದೇ ಆದ ಕೊಡುಗೆ ನೀಡಿದೆ.
ಇಂತಹ ಕೌಟುಂಬಿಕ ಹಿನ್ನೆಲೆಯಿಂದ ಬಂದ ಮಂತರ್ ಗೌಡ, ರೇಡಿಯೋಲಜಿ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. ವೈದ್ಯರಾಗಿ ಸಮಾಜ ಸೇವೆ ಮಾಡಲು ತುಡಿಯುತ್ತಿದ್ದ ಇವರನ್ನು ಸಹಜವಾಗಿ ರಾಜಕೀಯ ಕ್ಷೇತ್ರ ಆಕರ್ಷಿಸಿತು.
ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆ ಇದಕ್ಕೆ ಪ್ರೇರಣೆ ಎನ್ನಬಹುದು. ಕಾಂಗ್ರೆಸ್ ಪಕ್ಷದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಇವರು ಹಾಸನ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅತ್ಯುತ್ತಮ ಸಂಘಟಕ ಎಂಬ ಹೆಸರು ಗಳಿಸುತ್ತಾರೆ ಆನಂತರ ಚುನಾವಣಾ ರಾಜಕಾರಣಕ್ಕೂ ಧುಮುಕಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ Electionಯಲ್ಲಿ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಇವರು ಅತ್ಯುತ್ತಮ ಸಾಧನೆ ಮೂಲಕ ಗಮನಸೆಳೆದರಾದರೂ ಕೇವಲ 100 ಮತಗಳ ಅಂತರದಲ್ಲಿ ಸೋಲು ಅನುಭವಿಸುತ್ತಾರೆ.
ಇಂದಿನ ಸೋಲು ಮುಂದಿನ ಯಶಸ್ಸಿನ ಸೋಪಾನ ಎಂಬ ತತ್ವವನ್ನು ಬಲವಾಗಿ ನಂಬಿದ ಮಂತರ್ ಗೌಡ ಕೊಡಗು ಜಿಲ್ಲೆಯಲ್ಲಿಯೇ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗುತ್ತಾರೆ ಅಲ್ಲಿಯೇ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗುವ ಮೂಲಕ ಎಲ್ಲರ ಗಮನ ಸೆಳೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಗಿಟ್ಟಿಸುತ್ತಾರೆ.
ಪಕ್ಷದ ಟಿಕೆಟ್ ಪಡೆದ ಮಂತರ್ ಗೌಡ ಆನಂತರದಲ್ಲಿ ಎಲ್ಲಾ ಕಾಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಾಮಾನ್ಯರೊಂದಿಗೆ ಬೆರೆಯುವ ಮೂಲಕ ತಾವೊಬ್ಬ ವಿಶ್ವಾಸ ಮೂಡಿಸುವ ನಾಯಕ ಎಂದು ಮನದಟ್ಟು ಮಾಡಿಕೊಡುತ್ತಾರೆ. ಇದರ ಪರಿಣಾಮ ಸುದೀರ್ಘ ಎರಡು ದಶಕಗಳ ನಂತರ ಮಡಿಕೇರಿಯಲ್ಲಿ ಕಾಂಗ್ರೆಸ್ ಪತಾಕೆ ಹಾರುವಂತೆ ಮಾಡಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ.
ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಆ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗೊತ್ತಿ ಕ್ಷೇತ್ರದಲ್ಲಿ ಮನೆ ಮಗನ ರೀತಿಯಲ್ಲಿ ಎಲ್ಲರೊಳಗೊಂದಾಗಿ ಮುನ್ನಡೆಯುತ್ತಿದ್ದಾರೆ.
ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸಿದ್ದಾರೆ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ, ರಸ್ತೆ, ಸುಸಜ್ಜಿತ ಆಸ್ಪತ್ರೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ತಮ್ಮ ಆದ್ಯತೆ ಎಂದು ಈ ವಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇವರ ಸಂಘಟನಾ ಚಾತುರ್ಯ ಮತ್ತು ದೂರ ದೃಷ್ಟಿಗೆ ಸಾಕ್ಷಿ ಮಡಿಕೇರಿಯ ಕಾಫಿ ದಸರಾ, ಸರ್ಕಾರಿ ಆಸ್ಪತ್ರೆ, ತ್ಯಾಜ್ಯ ವಿಲೇವಾರಿ ಘಟಕ.
ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ನುಸುಳಲೇಬಾರದು ಎಂದು ಬಲವಾಗಿ ಪ್ರತಿಪಾದಿಸಿ ಅನುಷ್ಠಾನಕ್ಕೆ ತರುತ್ತಿರುವ ಈ ನಾಯಕ ಮಡಿಕೇರಿ ಕ್ಷೇತ್ರದ ಪಾಲಿಗೆ ಆಜಾತಶತ್ರು ಮತ್ತು ಭರವಸೆಯ ಬೆಳಕು.
Previous Articleಇವರೆಂಥಾ ಕಳ್ಳರು ನೋಡಿ
Next Article ಸತ್ತಿದ್ದ ವ್ಯಕ್ತಿ ಡಾಬಾ ಎನ್ನುತ್ತಿದ್ದಂತೆ ಎದ್ದು ಕೂತ