ಬೆಂಗಳೂರು, ಮೇ 13:
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿನ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಆಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಇರುವುದೇ ಅನುಮಾನ ಎಂದು ಹೇಳಿದರು.
ಚುನಾವಣೆ ಮುಗಿದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯಲಿದ್ದು ಅಲ್ಲಿ ಮತ್ತೊಮ್ಮೆ ಕಾಂಗ್ರೆಸ್ , ಎನ್ ಸಿ ಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ರಚನೆಯಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಉದ್ದವ್ ಠಾಕ್ರೆ ಬಗ್ಗೆ ಏಕೆ ಮಾತನಾಡಿದರು. ಅವರಿಗೆ ಶಕ್ತಿ ಇದೆ ಎನ್ನುವ ಕಾರಣಕ್ಕೆ. ಚುನಾವಣೆ ನಂತರ ಎನ್ ಸಿಪಿ ಮತ್ತು ಶಿವಸೇನೆ ಬಿಟ್ಟು ಹೋದವರು ಮರಳಿ ಬರುತ್ತಾರೆ. ಈ ಕಾರಣಕ್ಕೆ ಅವರು ಹೆದರಿದ್ದಾರೆ” ಎಂದು ಭವಿಷ್ಯ ನೀಡಿದರು.
ಕರ್ನಾಟಕದಲ್ಲಿ ಶಿಂಧೆ ತರದವರು ತರದವರು ಯಾರು ಇಲ್ಲ. ನಮಗೆ ಯಾರ ಭಯವೂ ಇಲ್ಲ. ಅವರ ಸರ್ಕಾರ ಬೀಳುತ್ತದೆ, ಪಕ್ಷ ಬಿಟ್ಟು ಬಂದವರು ಮರಳಿ ಹೋಗುತ್ತಾರೆ ಎನ್ನುವ ಭಯದಿಂದ ಹೀಗೆ ಹೇಳುತ್ತಿದ್ದಾರೆ” ಎಂದರು.
Previous Articleಮಹಾರಾಷ್ಟ್ರ ಸಿಎಂ ಆಪರೇಷನ್ ಇಲ್ಲಿ ನಡೆಯಲ್ಲ.
Next Article ತಿರುಕನ ಕನಸು ಕಾಣುತ್ತಿರುವ ಬಿಜೆಪಿ.

