ಬೆಂಗಳೂರು,ಅ.3:
ಮನೆಯ ಬೆಡ್ ರೂಂನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಆರೋಪ ಮಾಡಿ ಪತಿ ವಿರುದ್ಧ ನೀಡಿದ ದೂರು ಆಧರಿಸಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ನೀಡಿರುವ ದೂರಿನಂತೆ, ಸೈಯದ್ ಇನಾಮುಲ್ ಜೊತೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮದುವೆಯಾಗಿದೆ. ಆದರೆ, ಆತ ಅದಾಗಲೇ ಮತ್ತೊಂದು ಮದುವೆಯಾಗಿರುವುದನ್ನು ತಿಳಿಸದೇ ಎರಡನೇ ಮದುವೆ ಮಾಡಿಕೊಂಡಿದ್ದಾನೆಂದು ಆರೋಪ ಮಾಡಲಾಗಿದೆ.
ಆರೋಪಿ ಸಯ್ಯದ್ ದಿನನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದು, 19 ಮಂದಿ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಪಟ್ಟು ಹೇಳಿಕೊಳ್ಳುತ್ತಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯ ಬೆಡ್ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪಿ, ಆ ಖಾಸಗಿ ವಿಡಿಯೋಗಳನ್ನು ದುಬೈಯಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿರುವ ಗಂಭೀರ ಆರೋಪ ಕೂಡ ದಾಖಲಾಗಿದೆ.
ಆರೋಪಿಗೆ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ಯಮಹಾ ದ್ವಿ ಚಕ್ರ ವಾಹನ, 340 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕೊಡಲಾಗಿತ್ತು. ಮದುವೆ ಸಮಯದಲ್ಲಿ ಆರೋಪಿಯ ದೊಡ್ಡ ತಂಗಿಯ ಗಂಡನಾದ ಅಮೀನ್ ಬೇಗ್ (ಆರೋಪಿ-2) ಎಂಬಾತನು ಕ್ಯಾಟರಿಂಗ್ ವಿಳಂಬವಾಗಿರುವ ವಿಚಾರದಲ್ಲಿ, ಹಲವಾರು ಮಂದಿ ಎದುರು ಜಗಳ ಮಾಡಿ ಪಿರ್ಯಾದಿಯ ಕುಟುಂಬ ವರ್ಗದವರಿಗೆ ಅವಮಾನ ಮಾಡಿರುತ್ತಾನೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಆರೋಪಿ ಸಯ್ಯದ್, ತನಗೆ ಈಗಾಗಲೇ ಮದುವೆಯಾಗಿದ್ದು, ನೀನು 2ನೇ ಹೆಂಡತಿಯಾಗಿದ್ದಿ. ಅಲ್ಲದೇ ನನಗೆ 19 ಮಹಿಳೆಯರ ಜೊತೆ ಸಂಬಂಧವಿದೆ ಎಂಬುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆಯು ಆಕೆಯ ತಂದೆ-ತಾಯಿಯನ್ನು ಭೇಟಿ ಮಾಡದಂತೆ ನೋಡಿಕೊಂಡಿದ್ದ ಆರೋಪಿಯು, ಒಂದು ವೇಳೆ ಭೇಟಿಯಾಗಿ ತನ್ನ ಬಗ್ಗೆ ದೂರಿತ್ತರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಸದ್ಯ ಮಹಿಳೆಯ ದೂರಿನ ಆಧಾರದಲ್ಲಿ ಪುಟ್ಟೇನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
Previous Articleಶಕ್ತಿ ಯೋಜನೆಗೆ ಮತ್ತೊಂದು ಕಿರೀಟ
Next Article ಮತಗಳ್ಳತನದ ವಿರುದ್ಧ ಹೋರಾಟಕ್ಕೆ ಕರೆ.

