ಬೆಂಗಳೂರು,ಏ.22- ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್ ಟೇಕರ್ ಹೆಸರಲ್ಲಿ ಹಣ ಸಂಗ್ರಹಿಸಿ ವಂಚಿಸಿದ ಆರೋಪದ ಮೇಲೆ ಬೊಮ್ಮನಹಳ್ಳಿಯ ಖಾಸಗಿ ಟ್ರಸ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಅಜಯ್ ಹಾಗೂ ವೆಂಕಟಾಚಲ ಎಂಬ ಇಬ್ಬರು ನಡೆಸುತ್ತಿದ್ದ ಟ್ರಸ್ಟ್ ಇದಾಗಿದ್ದು, ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಭಾವನಾತ್ಮಕವಾಗಿ ನೋಡಿ ನೆರವು ನೀಡುವವರನ್ನು ಗುರಿಯಾಗಿಸಿಕೊಂಡು ಇವರಿಬ್ಬರು ಕೋಟ್ಯಾಂತರ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ವ್ಯವಸ್ಥಿತವಾಗಿ ಸಾರ್ವಜನಿಕರಿಂದ ಹಣ ಪಡೆಯುತಿದ್ದ ಈ ಟ್ರಸ್ಟ್. ಸುಮಾರು 20 ಹುಡುಗಿಯರು ತಿಂಗಳಿಗೆ 15 ಸಾವಿರ ಸಂಬಳಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ಹುಡುಗಿಯರಿಗೆ ತಿಂಗಳಿಗೆ 2 ರಿಂದ 3 ಲಕ್ಷ ಹಣ ಸಂಗ್ರಹಿಸುವ ಗುರಿ ನೀಡಲಾಗಿತ್ತು.
ಸಂಗ್ರಹ ಹೇಗೆ:
ಕೆಲ ನಂಬರ್ಗಳನ್ನ ಸಂಗ್ರಹ ಮಾಡಿ ಅವರಿಗೆ ಕಾಲ್ ಮಾಡಿ ನಮ್ಮದು ಅಕ್ಯೂಮೆಂಟ್ರಿಕ್ಸ್ ಎಂಬ ಟ್ರಸ್ಟ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ನಾವು ಅನಾಥರು, ವೃದ್ದರು, ಬಡವರು ಹಾಗೂ ಮಕ್ಕಳ ವಿದ್ಯಾಭ್ಯಾಸವನ್ನ ನೋಡುತ್ತಿದ್ದೀವಿ. ನೀವು ನಿಮ್ಮ ಕೈಲಾದ ಸಹಾಯ ಮಾಡಿ ಎಂದು ನಯವಾಗಿ ಮಾತನಾಡುತ್ತಾ ಅವರಿಂದ ಎಷ್ಟು ಸಾಧ್ಯವೋ ಅಷ್ಟು ಗೂಗಲ್ ಪೇ ಮೂಲಕ ಹಣ ಪಡೆದುಕೊಳ್ಳಯತ್ತಿದ್ದರು.
ಒಂದು ವೇಳೆ ಅನುಮಾನ ಬಂದು ವಿವರ ಕೇಳಿದರೆ, ಕೆಲ ಮಕ್ಕಳ, ವೃದ್ದರ ಕೇರ್ ಟೇಕ್ ಮಾಡುವ ರೀತಿಯಲ್ಲಿ ಪೋಟೋ ಕಳಿಸುತ್ತಿದ್ದರು.
ಇದನ್ನು ನಂಬಿ ನಗರದಲ್ಲಿ ಹಲವಾರು ಮಂದಿ ಹಣವನ್ನು ಹಾಕಿದ್ದಾರೆ. ಸುಮಾರು ಒಂದುವರೆ ವರ್ಷದಿಂದ ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರಿಂದ ಪಡೆದ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಂಡ ಮಾಹಿತಿ ಆಧರಿಸಿ ಸುಮಾರು 20 ಮಂದಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ,ವಂಚನೆ ಹಣ ಪಡೆದ ದಾಖಲೆಗಳು 20 ಬೇಸಿಕ್ ಮೊಬೈಲ್ ಗಳು ಹಾಗೂ ಲ್ಯಾಪ್ ಟ್ಯಾಪ್ಜಪ್ತಿ ಮಾಡಿ ಅಜಯ್ ಹಾಗೂ ವೆಂಕಟಾಚಲನನ್ನು
ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿದ್ದಾ
1 Comment
Секреты экономии: как найти и применять промокоды. free-promocode.ru .