ಸ್ಯಾಂಡಲ್‌ವುಡ್‌ಗೆ ಕೆಂಡಸಂಪಿಗೆ’ ಚಿತ್ರದ ಮೂಲಕ ಪರಿಚಿತರಾದ ನಟಿ ಮಾನ್ವಿತಾ ಹರೀಶ್, ಕನ್ನಡದ ಸಾಕಷ್ಟು ಚಿತ್ರಗಳ ಮೂಲಕ ಸಂಚಲನ ಮೂಡಿಸಿದ್ರು. ಇದೀಗ ಸಿನಿಮಾಗಳ ಮಧ್ಯೆ ತಮ್ಮ ವಿದ್ಯಾಭ್ಯಾಸಕ್ಕೂ ಸಮಯ ಮೀಸಲಿಟ್ಟು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆಂಡಸಂಪಿಗೆ, ಚೌಕ, ಚಿತ್ರದ ಬಳಿಕ ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಟಗರು ನಟಿಯಾಗಿ ಸಂಚಲನ ಸೃಷ್ಟಿಸಿದ್ರು. ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ಈ ಕರಾವಳಿ ಕುವರಿ ಮಾನ್ವಿತಾ 2020ರ
ಇಂಡಿಯಾ ವರ್ಸಸ್ ಇಂಗ್ಲೇಡ್’ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ರು. ಈ ಎರಡು ವರ್ಷ ಎನು ಮಾಡ್ತಿದ್ರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದ್ದು ಕೋವಿಡ್ ವೇಳೆಯಲ್ಲಿ ಮಾಸ್ ಕಮ್ಯೂನಿಕೇಷನ್ ಮಾಧ್ಯಮದ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಯು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ಮಾನ್ವಿತಾ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಜೈನ್ ಯೂನಿವರ್ಸಿಟಿನಲ್ಲಿ ಮಾಧ್ಯಮ ಕುರಿತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಇನ್ನು ಮಾನ್ವಿತಾ ನಟನೆಯ ಶಿವ 143, ರಾಜಸ್ತಾನ ಡೈರೀಸ್’ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ತೆರೆ ಕಾಣಲಿದೆ. ನಟ ಪೃಥ್ವಿ ಅಂಬರ್ ಜೊತೆ
‘ಹ್ಯಾಪಿ ಮ್ಯಾರೀಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಈ ಮೂರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ಕನ್ನಡದ ಜತೆಗೆ ಪರಭಾಷಾ ಚಿತ್ರಗಳಿಂದಲೂ ನಟಿಗೆ ಅವಕಾಶಗಳು ಅರಸಿ ಬರುತ್ತಿದೆ. ಒಂದೊಳ್ಳೆ ಕಥೆಯ ಮೂಲಕ ನಟಿ `ಟಗರು’ ಬ್ಯೂಟಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.