ಬೆಂಗಳೂರು: ಶಾಪಿಂಗ್ಗೆ ಬಂದಿದ್ದ ವಿದ್ಯಾರ್ಥಿಗಳಿಬ್ಬರು ಕಾಂಪ್ಲೆಕ್ಸ್ನಿಂದ ಬಿದ್ದಿದ್ದು, ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಿಯಾ (18) ಎಂಬ ಯುವತಿ ಸಾವನ್ನಪ್ಪಿದ್ದು, ಯುವಕ ಕ್ರಿಸ್ ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಲಿಯಾ ಕಾಕ್ಸ್ ಟೌನ್ನ ನಿವಾಸಿಯಾಗಿದ್ದು, ಕ್ರಿಸ್ ಪೀಟರ್ ಎಚ್‌ಎಎಲ್ ನಿವಾಸಿ. ಇಬ್ಬರೂ ಸೆಂಟ್ ಜೋಸೆಫ್ ಕಾಲೇಜ್ನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು. ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆಯೇ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾಲ್‌ನ ಸ್ಟೇರ್ ಕೇಸ್‌ನಿಂದ ಆಯತಪ್ಪಿ ಬಿದ್ದಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಶರಣಪ್ಪ ಹೇಳಿದ್ದಾರೆ.
ಮಾಲ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು, ಯುವಕನ ಸ್ಥಿತಿ ಗಂಭೀರ
Previous Articleಬಾಟಲ್ ಮುಚ್ಚಳ ಗಂಟಲಲ್ಲಿ ಸಿಲುಕಿ ಬಾಲಕ ಸಾವು!
Next Article ಸುಟ್ಟು ಕರಕಲಾದ ಪ್ರೇಮಿಗಳು