ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಹವ್ಯಾಸಗಳೇನು ಅಂತ ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅನೇಕರಂತೆ ಮೋದಿಯವರಿಗೂ ಅನೇಕ ಹವ್ಯಾಸಗಳಿವೆ. ಉತ್ತಮ ಹವ್ಯಾಸಗಳು ವ್ಯಕ್ತಿಯನ್ನು ಉತ್ತಮನನ್ನಾಗಿಸುತ್ತವೆ ಎನ್ನುವುದನ್ನು ಮೋದಿ ನಂಬಿದ್ದಾರೆ. ಮೋದಿಯವರ ಪ್ರಮುಖ ಹವ್ಯಾಗಳಲ್ಲಿ ಓದು ಮತ್ತು ಈಜುವುದು ಬಹಳ ಪ್ರಮುಖವಾದುವು ಎನ್ನಲಾಗಿದೆ. ಫೋಟೋಗ್ರಫಿ, ಯೋಗ, ಧ್ಯಾನ ಮತ್ತು ಫಿಟ್ನೆಸ್ ಕೂಡ ಮೋದಿಯವರ ಆಸಕ್ತಿಗಳು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಆದರೆ ಮೋದಿಯವರಿಗೆ ಇನ್ನೊಂದು ವಿಶೇಷ ಆಸಕ್ತಿ ಇದೆ. ಅದೇ ಅಡಿಗೆ. ಗುಜರಾತಿ ವೆಜಿಟೇರಿಯನ್ ಖಾದ್ಯಗಳ ತಯಾರಿ ಅವರಿಗೆ ಬಹಳ ಇಷ್ಟ ಆದರೆ ಅದಕ್ಕೆ ಈಗ ಸಮಯವಿಲ್ಲ ಎನ್ನುತ್ತಾರೆ ಅವರ ದಿನಚರಿಯನ್ನು ತಿಳಿದವರು. ಮೋದಿಯವರಿಗೆ ಕೈ ಗಡಿಯಾರಗಳೆಂದರೆ ಬಹಳ ಇಷ್ಟ ಎಂದು ಕೂಡ ವರದಿಯಾಗಿದೆ. ಈ ಎಲ್ಲಾ ಹವ್ಯಾಸಗಳ ಮೂಲಕ ಮೋದಿ ಸದಾ ಹುರುಪಿನಿಂದ ತಮ್ಮ ದಿನವನ್ನು ಕಳೆಯುತ್ತಾರೆ ಎನ್ನಲಾಗಿದೆ.
Previous Articleಬೆಂಗಳೂರಲ್ಲಿ ಎಲ್ಲೆಲ್ಲಿ ಸುರಂಗ ಮಾರ್ಗ ಬರಲಿದೆ ಗೊತ್ತಾ.
Next Article ರಷ್ಯಾಕ್ಕೆ ಓಡಿಹೋದ ಸಿರಿಯಾದ ಅಧ್ಯಕ್ಷ