ಬೆಂಗಳೂರು, ಜೂ.22:
ರಾಜ್ಯದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಲೈಂಗಿಕ ಹಗರಣಗಳು ಕೇಳಿಬರುತ್ತಿರುವ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬೇಸರ ಹೊರಹಾಕಿದ್ದಾರೆ.
ನಟ ದರ್ಶನ್, ಪ್ರಜ್ವಲ್ ರೇವಣ್ಣ, ಬಿಜಿಪಿ ನಾಯಕ ಬಿ ಎಸ್ ಯಡಿಯೂರಪ್ಪ ಹಾಗೂ ಸೂರಜ್ ರೇವಣ್ಣ ಪ್ರಕರಣಗಳನ್ನು ಉಲ್ಲೇಖಿಸಿ ಅಸಮಾಧಾನ ತೋಡಿಕೊಂಡಿದ್ದಾರೆ.
ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸದ್ಯ ಸುದ್ದಿಯಲ್ಲಿರುವವರು ಕಾನೂನು ಉಲ್ಲಂಘಿಸಿರುವ ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಇವರ ಹಿಂಸಾತ್ಮಕ ಕೃತ್ಯಗಳಿಂದಾಗಿ ಬಡವರು, ಮಹಿಳೆಯರು ಮತ್ತು ಮಕ್ಕಳ ಬಾಳು ಹಾಳಾಗಿದೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಅಭಿನಂದನೆಗಳು. ವಿಚಾರಣೆ ತ್ವರಿತಗೊಳಿಸಿ ಪ್ರಕರಣ ತಾರ್ತಿಕ ಅಂತ್ಯ ಕಂಡಾಗ ನಿಜವಾದ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?” ಎಂದು ಪ್ರಶ್ನಿಸಿದ್ದಾರೆ.
Previous Articleರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು.
Next Article ದರ್ಶನ್ ನಂಬಿದವರ ಪಾಡು ಅಯ್ಯೋ ಪಾಪ.